ಮಾಜಿ ಸಿಎಂ ಡಿವಿಎಸ್ ಪತ್ರಿಕಾಗೋಷ್ಟಿ| ಕಾಂಗ್ರೆಸ್ ಸೇರಲ್ಲ, ಬಿಜೆಪಿ ಸರಿ ಇಲ್ಲ ಎಂದು ಹರಿಹಾಯ್ದ‌ ಸದಾನಂದ ‌ಗೌಡ

ಸಮಗ್ರ ನ್ಯೂಸ್: ನನಗೆ ಕಾಂಗ್ರೆಸ್‌ ನಿಂದ ಆಹ್ವಾನ ಬಂದಿರುವುದು ಸತ್ಯ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಗೆ ಸೇರುವುದಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ.

Ad Widget ... ..

ಗುರುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯೂ ತಮ್ಮ ಕುಟುಂಬ ಮತ್ತು ಚೇಲಾಗಳಿಗೆ ಸೀಮಿತವಾಗಿದ್ದು, ಇದು ಬದಲಾಗಬೇಕಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Ad Widget

ಮುಂದಿನ ನಡೆ ಏನು ಎಂದು ಹಲವರು ನನಗೆ ಕೇಳಿದ್ದಾರೆ. ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ನೋವಾಗಿದೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ. ಮುಂದೆ ನನ್ನ ಮುಖ್ಯ ಉದ್ದೇಶ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಶುದ್ಧೀಕರಣ ಮಾಡುವುದು ಎಂದರು.

Leave a Comment

Your email address will not be published. Required fields are marked *