ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣಿಕೆ : ಭಟ್ಕಳದ ವ್ಯಕ್ತಿಯ ಬಂಧನ

ಸಮಗ್ರ ನ್ಯೂಸ್‌ : ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಟ್ಕಳ ಮೂಲದ ಪ್ರಯಾಣಿಕನೊಬ್ಬ 6 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಕಸ್ಟಮ್‌ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

Ad Widget ... ..

ಮಾರ್ಚ್‌ 19 ರಂದು ದುಬೈನಿಂದ ಪ್ರಯಾಣಿಸುತ್ತಿದ್ದ ಈ ವ್ಯಕ್ತಿ 6,19,200 ರೂಪಾಯಿ ಮೌಲ್ಯದ 96 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದನ್ನು ಕಸ್ಟಮ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Ad Widget

ವಶಪಡಿಸಿಕೊಂಡ ಚಿನ್ನವನ್ನು ಪೇಸ್ಟ್ ಆಗಿ ಪರಿವರ್ತಿಸಿ ಎರಡು ಲೇಯರ್ ಕಂದು ಕಾಗದದ ಹಾಳೆಗಳ ನಡುವೆ ಬಚ್ಚಿಟ್ಟಿದ್ದರು. ಇದನ್ನು ಕಳ್ಳಸಾಗಣೆ ಮಾಡುವುದಕ್ಕಾಗಿ ಟ್ರಾಲಿ ಬ್ಯಾಗ್‌ನಲ್ಲಿ ಅಡಗಿಸಿ ಇಡಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *