ಉಡುಪಿ: ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ಸಾವಿರಾರು ರೂ. ವಂಚನೆ

ಸಮಗ್ರ ನ್ಯೂಸ್‌ : ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಕುಮಾರ್ ಎಂಬವರು ಮಾರ್ಚ್ 14ರಂದು ತನ್ನ ವ್ಯವಹಾರದ 6000ರೂ. ಹಣವನ್ನು ಗೂಗಲ್ ಪೇನಲ್ಲಿ ಕೈತಪ್ಪಿನಿಂದ ಬೇರೊಂದು ನಂಬರಿಗೆ ಕಳುಹಿಸಿದ್ದು, ಈ ಸಂಬಂಧ ಗೂಗಲ್‌ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದರು. ಹಣವನ್ನು ಹಿಂದಕ್ಕೆ ಪಡೆಯಲು 5 ಡಿಜಿಟ್‌ಗಳ ಸಂಖ್ಯೆಗಳ ಆ್ಯಪ್‌ನಲ್ಲಿ ನಮೂದಿಸುವಂತೆ ತಿಳಿಸಿದ್ದರು. ಅದರಂತೆ ನಂಬರ್ ನಮೂದಿಸಿದ ಬಳಿಕ ಇವರ ಖಾತೆಯಿಂದ 75,040ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Ad Widget

Leave a Comment

Your email address will not be published. Required fields are marked *