ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ| ಈ ಗೂಂಡಾಗಿರಿ ಸಹಿಸಲಾಗದು ಎಂದ ಪ್ರಕಾಶ ರಾಜ್

ಸಮಗ್ರ ನ್ಯೂಸ್: ಬೆಂಗಳೂರು ನಗರದ ನಗರತ್ ಪೇಟೆಯಲ್ಲಿ ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಯುವಕರು ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿನ ಗೂಂಡಾಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ ಅಂತ ನಟ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.

Ad Widget ... ..

ಘಟನೆ ಬಗ್ಗೆ ನಟ ಪ್ರಕಾಶ್ ರಾಜ್ ಎಕ್ಸ್ ಮಾಡಿದ್ದು, ಈ ಗೂಂಡಾಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೇ ಧರ್ಮದ ಯಾವುದೇ ವ್ಯಕ್ತಿಯಿಂದ ಇಂತಹ ಗೂಂಡಾಗಿರಿ ಕೃತ್ಯಗಳು ನಡೆದರೂ ಅದನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಹೇಳಿದ್ದಾರೆ. ಈ ಮೂಲಕ #justasking ಹ್ಯಾಷ್‌ಟ್ಯಾಗ್‌ ಎಂಬುದಾಗಿ ತಿಳಿಸಿದ್ದಾರೆ.

Ad Widget

ನಟ ಪ್ರಕಾಶ್‌ ರೈ ಅವರ ಎಕ್ಸ್ ಪೋಸ್ಟ್ ಗೆ ಕೆಲವರು ಬಿಜೆಪಿ ಪರ ಬ್ಯಾಟ್ ಬೀಸುತ್ತಿದ್ದ ಅವರು, ಇದೇನು ಹೀಗೆ ಪೋಸ್ಟ್ ಮಾಡಿದ್ದಾರಲ್ಲ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದು ನಿಜವಾಗಿಯೂ ನಟ ಪ್ರಕಾರ್ ರೈ ಮಾಡಿರೋ ಪೋಸ್ಟಾ ಅಂತ ಪ್ರಶ್ನಸಿದ್ದಾರೆ. ಕೆಲವರಂತೂ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಅನಿಸುತ್ತಿದೆ ಅಂತ ಪ್ರತಿಕ್ರಿಯಿಸಿದ್ದಾರೆ.

Leave a Comment

Your email address will not be published. Required fields are marked *