ಮಕ್ಕಳಿಗೆ ಬೆಂಕಿ ಹಚ್ಚಿ ತಾನು ಬೆಂಕಿಗೆ ಆಹುತಿಯಾದ ತಾಯಿ

ಸಮಗ್ರ ನ್ಯೂಸ್: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊನೆಗೆ ತಾನೂ ಅಗ್ನಿ ಪ್ರವೇಶ ಮಾಡಿದ್ದ ಭಯಾನಕ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲ ಸಮುದ್ರ ಗ್ರಾಮದಲ್ಲಿ ನಡೆದಿದೆ.

Ad Widget ... ..

ಮಾರಕ್ಕ ಎಂಬ 24 ವರ್ಷದ ಮಹಿಳೆಯೇ ತನ್ನ ಇಬ್ಬರು ಪುಟ್ಟ ಕಂದಮ್ಮಗಳಾದ ನಯನ (4) ಮತ್ತು ಹರ್ಷ ವರ್ಧನ್ (2)ಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿ ತಾನೂ ಸಾವನ್ನಪ್ಪಿದವರು. ಮಕ್ಕಳನ್ನು ಮನೆಯಿಂದ ಹೊರಡಿಸಿ ಗ್ರಾಮದ ಹೊರವಲಯಕ್ಕೆ ಹೋಗಿ ಅಲ್ಲಿ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದಿಂದ ತೀವ್ರವಾಗಿ ನೊಂದಿದ್ದ ಆಕೆ ಬದುಕು ಬೇಡವೆಂದು ತೀರ್ಮಾನಿಸಿದ್ದಾರೆ. ನಾನು ಇಲ್ಲದಿದ್ದರೆ ಈ ಪುಟ್ಟ ಮಕ್ಕಳು ಹೇಗೆ ಬದುಕಿಯಾವು ಎಂಬ ಯೋಚನೆ ಬರುತ್ತಿದ್ದಂತೆಯೇ ಮೊದಲು ಅವರನ್ನು ಬೆಂಕಿಗೆ ಹಾಕಿ ಕೊನೆಗೆ ತಾನೂ ಆಹುತಿಯಾಗಿದ್ದಾರೆ.

Ad Widget

ಬೆಂಕಿಯ ಕೆನ್ನಾಲಿಗೆಯಲ್ಲಿ ಮಕ್ಕಳು ಮತ್ತು ತಾಯಿ ಸುಟ್ಟು ಹೋದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ.

Leave a Comment

Your email address will not be published. Required fields are marked *