ಪುತ್ತೂರು : ತೆಂಗಿನ ಮರದ ವಿಚಾರ| ಮಹಿಳೆಗೆ ಹಲ್ಲೆ, ಜೀವ ಬೆದರಿಕೆ

ಸಮಗ್ರ ನ್ಯೂಸ್ :ತೋಟದಲ್ಲಿದ್ದ ಮಹಿಳೆಯೊಬ್ಬರಿಗೆ ಪಕ್ಕದ ತೋಟದ ವ್ಯಕ್ತಿಯೊಬ್ಬರು ತೆಂಗಿನ ಮರದ ವಿಚಾರ ತೆಗೆದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಇತ್ತೀಚೆಗೆ ಸಾಮೆತ್ತಡ್ಕದಲ್ಲಿ ನಡೆದಿದೆ.

Ad Widget ... ..

ಸಾಮೆತ್ತಡ್ಕ ನಿವಾಸಿ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ‘ಮಹಿಳೆಯ ತಂದೆಯ ಮರಣಾನಂತರ ಅವರ ಅಡಿಕೆ ಮತ್ತು ತೆಂಗಿನ ತೋಟವನ್ನು ನೋಡಿಕೊಳ್ಳುತ್ತಿದ್ದು, ಮಾ.13ರಂದು ಸಂಜೆ ಸಹೋದರ ಮುಹಮ್ಮದ್ ಮುಸ್ತಾಫ ಅವರೊಂದಿಗೆ ತೋಟಕ್ಕೆ ಹೋಗಿದ್ದ ಸಮಯ ನೌಫಲ್ ಎಂಬವರ ಮೂಲಕ ತೆಂಗಿನ ಮರದಿಂದ ಎಳನೀರು ಮತ್ತು ತೆಂಗಿನ ಕಾಯಿ ತೆಗೆಸುತ್ತಿದ್ದ ವೇಳೆ ಪಕ್ಕದ ತೋಟದ ಎಮ್.ಕೆ. ಉಮ್ಮರ್ ಎಂಬವರು ಬಂದು ಮಹಿಳೆಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ. ಘಟನೆ ಕುರಿತು ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad Widget

Leave a Comment

Your email address will not be published. Required fields are marked *