ಬಂಟ್ವಾಳ: ಬೈಕ್-ಸ್ಕೂಟರ್ ಢಿಕ್ಕಿ|ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್ : ಶಂಭೂರು ಶ್ರೀ ಷಣ್ಮುಖ ದೇವಸ್ಥಾನದ ದ್ವಾರದ ಬಳಿಯಲ್ಲಿ ಬೈಕ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದುಕೊಂಡ ಪರಿಣಾಮ ಎರಡೂ ವಾಹನಗಳ ನಾಲ್ವರು ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ.

Ad Widget ... ..

ಸ್ಕೂಟರ್ ಸವಾರ ಮಂಗಳೂರು ಅಳಪೆ ನಿವಾಸಿ ಉದಯಕುಮಾರ್ ಅವರು ಸಂಬAಧಿ ಸುಂದರ ಬಂಗೇರ ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಅಶ್ವತ್ಥ್ ಅವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Ad Widget

ಘಟನೆಯಲ್ಲಿ ಎರಡು ಬೈಕ್‌ಗಳಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಸುಂದರ ಬಂಗೇರ ಅವರನ್ನು ಒಳರೋಗಿಯಾಗಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *