ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ/ ಜಪಾನ್ ಹೈಕೋರ್ಟ್ ಅಭಿಪ್ರಾಯ

ಸಮಗ್ರ ನ್ಯೂಸ್: ಸರ್ಕಾರ, ಸಲಿಂಗ ವಿವಾಹಕ್ಕೆ ಅವಕಾಶ ನೀಡಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಜಪಾನ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Ad Widget ... ..

ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ. ಪ್ರಸ್ತುತ ವಿವಾಹ ಕಾನೂನನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಕಾನೂನನ್ನು ಪರಿಷ್ಕರಿಸದ ಹೊರತು ಎಲ್‍ಜಿಬಿಟಿಕ್ಯು + ದಂಪತಿಗಳು ಅಥವಾ ಇತರ ರೀತಿಯ ವಿವಾಹಗಳಿಗೆ ಅನುಮತಿಸುವ ಹೊಸ ಕಾನೂನನ್ನು ಜಾರಿಗೊಳಿಸದ ಹೊರತು ಸರ್ಕಾರಿ ಕಚೇರಿಗಳು ಸಲಿಂಗ ದಂಪತಿಗಳಿಗೆ ವಿವಾಹ ಮಾನ್ಯತೆ ನಿರಾಕರಿಸುವುದನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದೆ.

Ad Widget

ಸಲಿಂಗಿ ಜೋಡಿಗಳಿಗೆ ಮದುವೆಯಾಗಲು ಮತ್ತು ಸಾಮಾನ್ಯ ದಂಪತಿಗಳಿಗಿರುವ ಪ್ರಯೋಜನಗಳನ್ನು ಪಡೆಯಲು ಅನುಮತಿ ನಿರಾಕರಿಸುವ ಮೂಲಕ ಕುಟುಂಬವನ್ನು ಹೊಂದುವ ಸಲಿಂಗಿ ದಂಪತಿಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೇಳಿದೆ. ಟೋಕಿಯೊ ಜಿಲ್ಲಾ ನ್ಯಾಯಾಲಯದ ತೀರ್ಪು, ಜಪಾನ್‍ನ ಎಲ್‍ಜಿಬಿಟಿಕ್ಯು+ ಸಮುದಾಯವು ಸಮಾನ ವಿವಾಹ ಹಕ್ಕುಗಳಿಗೆ ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕಿರುವ ಭಾಗಶಃ ಜಯವಾಗಿದೆ .

Leave a Comment

Your email address will not be published. Required fields are marked *