ರಾಮಮಂದಿರಕ್ಕೆ ಪ್ರತಿದಿನ ಒಂದೂವರೆ ಲಕ್ಷ ಜನ ಭಕ್ತರು ಭೇಟಿ/ ಪ್ರವೇಶ ಸಂಪೂರ್ಣ ಉಚಿತ

ಸಮಗ್ರ ನ್ಯೂಸ್: ಪ್ರತೀದಿನ ರಾಮಮಂದಿರಕ್ಕೆ ಸರಾಸರಿ ಒಂದರಿಂದ ಒಂದೂವರೆ ಲಕ್ಷ ಜನ ಭಕ್ತರು ಭೇಟಿ ನೀಡುತ್ತಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ತಿಳಿಸಿದೆ.

Ad Widget ... ..

60ರಿಂದ 70 ನಿಮಿಷದೊಳಗೆ ಶ್ರೀರಾಮ ದೇವರ ದರ್ಶನ ಮಾಡಲು ಭಕ್ತರ ಅನುಕೂಲಕ್ಕಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 6.30ರಿಂದ ಆರಂಭವಾಗಿ ರಾತ್ರಿ 9.30ರ ವರೆಗೆ ದರ್ಶನ ಸಮಯ ನಿಗದಿಪಡಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಟ್ವೀಟ್ ಮಾಡಿ ತಿಳಿಸಿದೆ.

Ad Widget

ದರ್ಶನ ಟಿಕೆಟ್ ಅನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ವೆಬ್‍ಸೈಟ್‍ನಿಂದ ಪಡೆಯಬಹುದಾಗಿದ್ದು, ಪ್ರವೇಶ ಸಂಪೂರ್ಣ ಉಚಿತವಾಗಿದೆ. ಮಂದಿರಕ್ಕೆ ಬರುವಾಗ ಹೂವು, ಹಾರ, ಪ್ರಸಾದ ಇತ್ಯಾದಿಗಳನ್ನು ತರದಂತೆ ಮನವಿ ಮಾಡಲಾಗಿದೆ. ನಿರ್ದಿಷ್ಟ ಶುಲ್ಕ ಪಾವತಿಸಿ ಅಥವಾ ವಿಶೇಷ ಪಾಸ್ ಮೂಲಕ ವಿಶೇಷ ದರ್ಶನಕ್ಕೆ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿದೆ.

Leave a Comment

Your email address will not be published. Required fields are marked *