ಕಾಲು ಜಾರಿ ಬಾವಿಗೆ ಬಿದ್ದು ಬಾಲಕ ಸಾವು

ಅಥಣಿ: ಕಾಲು ಜಾರಿ ಆಕಸ್ಮಿಕವಾಗಿ ಬಾಲಕ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ನಡೆದಿದೆ. ಆಕಾಶ್ ಯಲ್ಲಪ್ಪ ಹುಲಸದಾರ್ (5 ವ) ಮೃತಪಟ್ಟ ಬಾಲಕ.

Ad Widget ... ..

ಎಡೆಬಿಡದೆ ಸುರಿತ್ತಿರುವ ಭಾರೀ ಮಳೆಯ ನಡುವೆ ಬಾಲಕ, ಪಕ್ಕದ ಮನೆಗೆ ಹೋದ ಅಜ್ಜನನ್ನು ಹಿಂಬಾಲಿಸಿ ಓಡಿದ್ದಾನೆ. ಈ ಸಂದರ್ಭ ಬಾಲಕ ಕಾಲು ಜಾರಿ ಬಾವಿಗೆ ಬಿದ್ದಿದ್ದಾನೆ. ಬಾಲಕ ಬಾವಿಗೆ ಬಿದ್ದ ವಿಷಯ ಅಜ್ಜನ ಗಮನಕ್ಕೆ ಬರಲಿಲ್ಲ. ಅಜ್ಜ ಮನೆಗೆ ವಾಪಾಸಾದ ಬಳಿಕ ಮನೆಯವರೆಲ್ಲ ಆಕಾಶ್ ನನ್ನು ಕಾಣದೆ ಸುತ್ತಮುತ್ತ ಹುಡುಕಾಡಿದ್ದಾರೆ. ಕೊನೆಗೆ ಬಾಲಕನ ಮೃತದೇಹ ಬಾವಿಯಲ್ಲಿ ಪತ್ತೇಯಾಗಿದೆ.

Ad Widget

ಅಗ್ನಿಶಾಮಕದಳ ಸಿಬ್ಬಂದಿ ಮನುವಿನ ಮೃತದೇಹ ಮೇಳಕ್ಕೆತ್ತಿದ್ದಾರೆ. ಅಥಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *