ಸಮಗ್ರ ನ್ಯೂಸ್ : ದ್ವಿಚಕ್ರ ವಾಹನವನ್ನು ನಿಲ್ಲಿಸಿ ಉಮೇಶ್ ಪ್ರಭು ಅವರ ಬಳಿಯಿದ್ದ 1,25,000 ರೂ. ಹಣ ಇದ್ದ ಬ್ಯಾಗನ್ನು ಕದ್ದು ಆರೋಪಿ ಪರಾರಿಯಾಗಿರುವ ಘಟನೆ ಕಾಪು ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಸಂತೋಷ ಕುಮಾರ್(28) ಎಂದು ಗುರುತಿಸಲಾಗಿದೆ
ಉಡುಪಿ ಜಿಲ್ಲೆಯ ಸಂತೆಕಟ್ಟೆ ನಿವಾಸಿ ಉಮೇಶ ಪ್ರಭು ರವರು ವಾಹನದಲ್ಲಿ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಲೈನ್ ಸೇಲ್ ಮಾಡುವ ವೃತ್ತಿ ಮಾಡಿಕೊಂಡಿದ್ದು, ಮಾ. 02 ರಂದು ಎಂದಿನಂತೆ ಲೈನ್ ಸೇಲ್ ಮಾಡಿ ಬಂದ ಹಣ 1,25,000 ರೂ. ನಗದನ್ನು ಬ್ಯಾಗಿನಲ್ಲಿ ಹಾಕಿಕೊಂಡು ವಾಪಸ್ ಆಗುತ್ತಿದ್ದರು.ಈ ವೇಳೆ ಕಾಪು ಮಾರಿಗುಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದ ಆರೋಪಿ ಸಂತೋμï ಕುಮಾರ್ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಉಮೇಶ್ ಪ್ರಭು ಅವರ ಬಳಿಯಿದ್ದ 1,25,000 ರೂ. ಹಣ ಇದ್ದ ಬ್ಯಾಗನ್ನು ಕದ್ದು ಪರಾರಿಯಾಗಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾಪು ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿ ಇಂದು ಆರೋಪಿಯನ್ನ ಬಂಧಿಸಿದ್ದಾರೆ.
ಸುಲಿಗೆ ಮಾಡಿದ ಆರೋಪಿಯ ಪತ್ತೆ ಬಗ್ಗೆ ಕಾಪು ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯ ಮಾತುಕತೆಯಿಂದ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗೆ ಸಂಬಂಧಿಸಿದ ರೂ. 1,00,200 ನಗದು, 1 ಮೊಬೈಲ್ ಫೋನ್, ಹಾಗೂ ಆರೋಪಿಯ ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡು ಬಂಧಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಅರವಿಂದ ಕಲಗುಜ್ಜಿ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಜಯಶ್ರೀ ಎಸ್ ಮಾನೆ ಹಾಗೂ ವೃತ್ತ ನಿರೀಕ್ಷಕರು ಕಾಪು ರವರ ನೇತೃತ್ವದಲ್ಲಿ, ಪುರುಷೋತ್ತಮ ಪಿ.ಎಸ್.ಐ (ತನಿಖೆ) ತಂಡದ ಪ್ರವೀಣ ಕುಮಾರ್, ನಾರಾಯಣ ಕಾಪು ಠಾಣೆ, ರಾಜೇಶ್ ಪಡುಬಿದ್ರಿ ಠಾಣೆ ರವರು ಭಾಗವಹಿಸಿದ್ದಾರೆ.ಡಾ. ಅರುಣ ಕೆ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ಟಿ. ಸಿದ್ದಲಿಂಗಪ್ಪ, ಶ್ರೀ ಪರಮೇಶ್ವರ ಹೆಗ್ಡೆ ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಪ್ರಶಂಶಿಸಿದ್ದಾರೆ.