ಅಕ್ರಮ ಸಂಬಂಧದಿಂದ ಮಗು ಜನನ: ಹಸುಗೂಸನ್ನು ಕುತ್ತಿಗೆ ಹಿಚುಕಿ ಕೊಂದ ಅಪ್ಪ

ಸಮಗ್ರ ನ್ಯೂಸ್: ಅಕ್ರಮ ಸಂಬಂಧದಿಂದ ಮಗು ಜನಿಸಿದ ಆರೋಪಕ್ಕೆ ಮಗು ಜನಿಸುತ್ತಲೆ ತಂದೆ, ಅಜ್ಜಿ ಕುತ್ತಿಗೆ ಹಿಚುಕಿ ಕೊಂದ ದಾರುಣ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ.

Ad Widget ... ..

ಮಗುವನ್ನು ಕೊಂದ ಬಳಿಕ ಮೃತ ಹಸುಗೂಸನ್ನು ಗದ್ದೆಯಲ್ಲಿ ಹೂತಿಟ್ಟಿದ್ದಾರೆ. ಆರೋಪಿಗಳಾದ ತಂದೆ ಕುಮಾರ್, ಅಜ್ಹಿ ಯಮುನಾ ಇಬ್ಬರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

Ad Widget

ಆರೋಪಿಯಾದ ಕುಮಾರ್​ ವಿವಾಹಿತನಾಗಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇತ್ತ ಹೆರಿಗೆಗೆಂದು ಕುಮಾರನ ಪತ್ನಿ ತವರಿಗೆ ತೆರಳಿದ್ದಳು. ಇದೇ‌ ಸಂದರ್ಭ ತುಂಬು ಗರ್ಭಿಣಿ ಯುವತಿಯನ್ನ ಮನೆಗೆ ಕರೆತಂದ ಕುಮಾರ್​, ಮಗು ಜನಿಸಿದ ಬಳಿಕ‌ ತಾನೇ ಸಾಕುವುದಾಗಿ ಪ್ರೇಯಸಿಗೆ ಭರವಸೆ ನೀಡಿದ್ದಾನೆ. ಬಳಿಕ ಕುಮಾರ್​ ಮನೆಯಲ್ಲಿಯೇ ಯುವತಿ ಮಗುವಿಗೆ ಜನ್ಮ‌ನೀಡಿದ್ದಾಳೆ. ಯಾವಾಗ ಯುವತಿ ಮನೆಯಿಂದ‌ ತೆರಳಿದಳೋ ತಕ್ಷಣ ಮಗುವಿನ ಹತ್ಯೆ ಮಾಡಿದ್ದಾರೆ. ಇಂದು ಬೆಳಗ್ಗಿನ ಜಾವ ಗದ್ದೆಯಲ್ಲಿ ಮೃತ ಹಸುಗೂಸಿನ ತಂದೆ ಕುಮಾರ್​ ಹಾಗೂ ಅಜ್ಜಿ ಜಾನಕಿ ಗುಂಡಿ ತೆಗೆದಿದ್ದಾರೆ. ಇದನ್ನ ಸ್ಥಳೀಯ ನಿವಾಸಿಗಳು ಗಮನಿಸಿ, ಶಂಕೆಯಿಂದ ಮಣ್ಣು ತೆಗೆದು ನೋಡಿದಾಗ ಗಂಡು ಮಗುವಿನ ಶವ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

Leave a Comment

Your email address will not be published. Required fields are marked *