ಚಾರ್ಮಾಡಿ: ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೇಲ್| ಸಮಯಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿಸಿದ ಚಾಲಕ

ಸಮಗ್ರ ನ್ಯೂಸ್: ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ 70 ಪ್ರಯಾಣಿಕರ ಜೀವವನ್ನು ಉಳಿಸಿದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ಮಾ. 8ರಂದು ಬೆಳಗ್ಗೆ ನಡೆದಿದೆ.

Ad Widget ... ..

ಕಡೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಬ್ರೇಕ್ ಫೇಲ್ ಆದುದನ್ನು ಅರಿತ ಚಾಲಕ ಸಮಯಪ್ರಜ್ಞೆಯಿಂದ ರಸ್ತೆಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆಸಿ ಬಸ್ಸನ್ನು ನಿಲ್ಲುವಂತೆ ಮಾಡಿದ್ದಾನೆ.

Ad Widget

ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದು ಬಸ್ ನಿಂತಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಅತ್ಯಂತ ಅಪಾಯಕಾರಿ ತಿರುವುಗಳಿಂದ ಕೂಡಿರುವ ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಚಾಲಕ ತೋರಿದ ಸಮಯಪ್ರಜ್ಞೆ ಪ್ರಯಾಣಿಕರ ಜೀವ ಉಳಿಸಿದೆ.

Leave a Comment

Your email address will not be published. Required fields are marked *