ಮೋದಿ ಎರಡು ಸಾವಿರ ದೇಣಿಗೆ/ ರಾಷ್ಟ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ದೇಣಿಗೆ ನೀಡುವಂತೆ ಕರೆ

ಸಮಗ್ರ ನ್ಯೂಸ್: ನಮೊ ಆ್ಯಪ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪಕ್ಷಕ್ಕೆ 2 ಸಾವಿರ ರು. ದೇಣಿಗೆ ನೀಡಿದ್ದು, ಇತರರು ಸಹ ರಾಷ್ಟ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ದೇಣಿಗೆ ನೀಡುವಂತೆ ಕರೆ ನೀಡಿದ್ದಾರೆ.

Ad Widget ... ..

ವಿಕಸಿತ ಭಾರತ ನಿರ್ಮಿಸಲು ಬಿಜೆಪಿಗೆ ನಾನು 2 ಸಾವಿರ ರು. ದೇಣಿಗೆ ನೀಡಿದ್ದೇನೆ ಎಂದು ತಿಳಿಸಲು ಹರ್ಷವಾಗುತ್ತಿದೆ. ನೀವು ಸಹ ದೇಣಿಗೆ ನೀಡಿ ರಾಷ್ಟ್ರದ ಬೆಳವಣಿಗೆಯಲ್ಲಿ ಪಾಲ್ಗೊಳ್ಳಿ ಎಂದು ರಸೀತಿಯನ್ನೂ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

Ad Widget

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‍ಗಳನ್ನು ರದ್ದು ಮಾಡಿದ ಬೆನ್ನಲ್ಲೆ ನರೇಂದ್ರ ಮೋದಿ ಬಿಜೆಪಿಗೆ ದೇಣಿಗೆ ನೀಡುವಂತೆ ಕರೆ ನೀಡುವ ಮೂಲಕ ಪಕ್ಷದ ಸಂಪನ್ಮೂಲವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Leave a Comment

Your email address will not be published. Required fields are marked *