ಕುಕ್ಕೆ ಸುಬ್ರಹ್ಮಣ್ಯ: ರಿಕ್ಷಾ ಪಲ್ಟಿಯಾಗಿ ಚಾಲಕ ಸಾವು

ಸಮಗ್ರ ನ್ಯೂಸ್: ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವಾಗ ಮೃತಪಟ್ಟ ಘಟನೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಬಳಿ ನಡೆದಿದೆ.

Ad Widget ... ..

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ ಎಂಬವರು ಮಾ.3 ರಾತ್ರಿ ಗಂಟೆ 9 ರ ಆಸುಪಾಸು ಇಂಜಾಡಿ ಬಳಿ ಅಟೋದಲ್ಲಿ ಹೋಗುತ್ತಿರುವಾಗ ಲೋ ಬಿ.ಪಿ ಆಗಿ ರಿಕ್ಷಾ ರಸ್ತೆ ಬದಿ ಚಲಿಸಿ ಪಲ್ಟಿಯಾಗಿ ಬಿದ್ದು ಗಂಭೀರ ಗಾಯಗೊಂಡರೆನ್ನಲಾಗಿದೆ.

Ad Widget

ತಕ್ಷಣ ಅವರನ್ನು ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *