ಆಡಳಿತತ್ಮಾಕ ಸುಧಾರಣೆ/ ಕೇಂದ್ರ ಸರ್ಕಾರದಿಂದ ಖಾಸಗಿ ವಲಯದ ಪರಿಣತರ ನೇಮಕ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಆಡಳಿತ ಸುಧಾರಣೆ ತರುವ ನಿಟ್ಟಿನಲ್ಲಿ ಖಾಸಗಿ ವಲಯದ ಪರಿಣತರನ್ನು ಶೀಘ್ರದಲ್ಲಿ 25 ಜನರನ್ನು ನೇಮಿಸಿಕೊಳ್ಳಲಿದೆ. ವಿವಿಧ ಇಲಾಖೆಗಳ ನಿರ್ದೇಶಕರು, ಹೆಚ್ಚುವರಿ ಕಾರ್ಯದರ್ಶಿಗಳ ಸ್ಥಾನದಲ್ಲಿ ಇವರು ಕೆಲಸ ಮಾಡಲಿದ್ದಾರೆ.

Ad Widget ... ..

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟ ನೇಮಕ ಸಮಿತಿ (ಎಸಿಸಿ) ಇವರ ನೇಮಕಕ್ಕೆ ಅನುಮೋದನೆ ನೀಡಿದ್ದು, ಮೂವರು ಜಂಟಿ ಕಾರ್ಯದರ್ಶಿ, 22 ನಿರ್ದೇಶಕರು ಹಾಗೂ ಉಪ ನಿರ್ದೇಶಕರ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರನ್ನು ನೇಮಕ ಮಾಡಲಾಗುತ್ತದೆ.

Ad Widget

ಈಗಾಗಲೇ 38 ಪರಿಣತರು 2018ರಲ್ಲಿ ಜಾರಿಯಾದ ಈ ನೇಮಕ ಪ್ರಕ್ರಿಯೆಯಲ್ಲಿ ನೇಮಕವಾಗಿದ್ದು, ಅದರಲ್ಲಿ 33 ಮಂದಿ ಇನ್ನು ಕಾರ್ಯನಿರ್ವಹಿಸುತ್ತಿದ್ದಾರೆ.

Leave a Comment

Your email address will not be published. Required fields are marked *