6 ಟ್ರಂಕ್ ಗಳಲ್ಲಿ ತಮಿಳುನಾಡಿಗೆ ಮರಳಲಿದೆ ಜಯಲಲಿತಾ ಆಭರಣಗಳು

ಸಮಗ್ರ ನ್ಯೂಸ್: ಜಯಲಲಿತಾರ ಆಭರಣಗಳು ತಮಿಳುನಾಡಿಗೆ ಮರಳುತ್ತಿದೆ. ಬೆಂಗಳೂರಿನ ವಿಶೇಷ ಕೋರ್ಟ್ 6 ಟ್ರಂಕ್ ಗಳೊಂದಿಗೆ ಬೆಂಗಳೂರಿಗೆ ಬರುವಂತೆ ತಮಿಳುನಾಡಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ.

Ad Widget ... ..

ಕರ್ನಾಟಕದ ಮೇಲುಕೋಟೆಯಲ್ಲಿ ಜನಿಸಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರು ಆದಾಯ ಮೀರಿದ‌ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದರು. ವಿಚಾರಣೆ ಬೆಂಗಳೂರಿನಲ್ಲಿ ನಡೆದಿದ್ದರಿಂದ ಜಯಲಲಿತಾರಿಂದ ಆಭರಣ, ಸೀರೆ ಮತ್ತಿತರ ವಸ್ತುಗಳೂ ಬೆಂಗಳೂರಿನ ಕೋರ್ಟ್ ಸುಪರ್ದಿಯಲ್ಲೇ ಇದ್ದವು.‌ ಇದೀಗ ಈ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಕೋರ್ಟ್ ನಿರ್ಧರಿಸಿದೆ. ದಿ. ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿಯಾಗಿದ್ದ ಜಯಲಲಿತಾರ ಒಡವೆ ಹಿಂತಿರುಗಿಸಲು ದಿನಾಂಕ‌ ನಿಗದಿಪಡಿಸಿರುವ ಕೋರ್ಟ್ ಮಾರ್ಚ್ 6 ಮತ್ತು 7 ರಂದು ತಮಿಳುನಾಡು ಸರ್ಕಾರಕ್ಕೆ‌ ಒಡವೆ ಹಸ್ತಾಂತರ ಮಾಡಲು ತೀರ್ಮಾನಿಸಿದೆ. ಒಡವೆ ಸ್ವೀಕರಿಸಲು ತಮಿಳುನಾಡು ಸರ್ಕಾರದಿಂದ ಇಬ್ಬರು ಅಧಿಕಾರಿಗಳ ನೇಮಕವಾಗಿದೆ. ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ವಿಶೇಷ ನ್ಯಾಯಾಧೀಶ ಮೋಹನ್ ಸೂಚನೆ ನೀಡಿದ್ದಾರೆ.‌

Ad Widget

ಒಡವೆ ಮತ್ತಿತರ ಜಯಲಲಿತಾರ ವಸ್ತುಗಳನ್ನು ಒಯ್ಯಲು 6 ಟ್ರಂಕ್ ಗಳನ್ನು ತರಬೇಕು ವಿಡಿಯೋಗ್ರಾಫರ್, ಫೋಟೋಗ್ರಾಫರ್ ಕರೆತರಲು ಸೂಚನೆ ನೀಡಿದೆ. ಒಡವೆ ಹಸ್ತಾಂತರದ‌‌ ಎರಡೂ ದಿನಗಳು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಭದ್ರತೆ ಒದಗಿಸಲು ಪೊಲೀಸರಿಗೆ ಸೂಚನೆ ನೀಡಿದೆ.
ವ್ಯಾಜ್ಯ ಶುಲ್ಕವಾಗಿ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ ಅದರ ಜೊತೆಗೆ 5 ಕೋಟಿ ರೂಪಾಯಿ ಪಾವತಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ.

Leave a Comment

Your email address will not be published. Required fields are marked *