ಕೇಂದ್ರವನ್ನು ಸಮರ್ಥಿಸುವ ಭರದಲ್ಲಿ ಧರ್ಮವನ್ನು ಎಳೆದು ತಂದ ಹರೀಶ್ ಪೂಂಜಾ| ಹಿಂದೂಗಳ ತೆರಿಗೆ ಹಿಂದೂಗಳಿಗೆ ನೀಡಲಿ ಎಂದ ಶಾಸಕ

ಸಮಗ್ರ ನ್ಯೂಸ್: ಕೇಂದ್ರ ಹಾಗೂ ರಾಜ್ಯ ಸರಕಾರದ ನಡುವೆ ನಡೆಯುತ್ತಿರುವ ತೆರಿಗೆ ಗಲಾಟೆ ನಡುವೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಮಾಜಿಕ ಜಾಲತಾಣ ಮಾಡಿರುವ ಪೋಸ್ಟ್ ಒಂದು ಇದೀಗ ವೈರಲ್ ಆಗಿದೆ.

Ad Widget ... ..

ನನ್ನ ತೆರಿಗೆ ನನ್ನ ಹಕ್ಕು ಆಂದೋಲನದ ಹಿನ್ನೆಲೆಯಲ್ಲಿ ಅವರು “ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ
ಹಣ ಹಿಂದುಗಳ ಅಭಿವೃದ್ಧಿಗೆ ಮಾತ್ರ ಉಪಯೋಗಿಸಬೇಕು.

Ad Widget

ಹಿಂದೂಗಳು ಕಟ್ಟಿದ ತೆರಿಗೆ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದೂಗಳಿಗೆ ಆಗುವ ಅನ್ಯಾಯ, ಹಿಂದುಗಳ ತೆರಿಗೆ ಹಿಂದುಗಳ ಹಕ್ಕು” ಎಂದು ಬರೆದಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಾಕರದ ನಡುವಿನ ತೆರಿಗೆ ವಿವಾದ ಇದೀಗ ಧರ್ಮಗಳ ನಡುವೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *