ಸಂಪಾಜೆ: ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು

ಸಮಗ್ರ ನ್ಯೂಸ್: ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಸಹಿತ ಹಣ ಕಳ್ಳತನ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಬೈಲು ಎಂಬಲ್ಲಿ ಫೆ.08 ರಂದು ನಡೆದಿದೆ.‌ ಇಲ್ಲಿನ ಕನ್ಯಾನ ವಿಜಯ ಕುಮಾರ್ ಅವರ ಮನೆಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Ad Widget ... ..

ವಿಜಯಕುಮಾರ್ ಕಲ್ಲುಗುಂಡಿಯ ತಮ್ಮ ಅಂಗಡಿಗೆ ಹೋಗಿ ಸಂಜೆ ವೇಳೆ ಮನೆಗೆ ಹಿಂದಿರುಗಿ ನೋಡಿದಾಗ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿತ್ತು. ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಲಾಗಿದ್ದು, ಸಂಪಾಜೆ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ.

Ad Widget

ಮನೆಯಿಂದ 40 ಗ್ರಾಂ ಚಿನ್ನಾಭರಣ ಮತ್ತು 20ಸಾವಿರ ಮೌಲ್ಯದ ಹಣ , ಉಂಗುರ ಕಳ್ಳತನವಾಗಿದೆ. ಸ್ಥಳಕ್ಕೆ ಮಡಿಕೇರಿ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಕೆ, ಕ್ರೈಂ ಶ್ರೀನಿವಾಸಲು, ಸಿಬ್ಬಂದಿ ರಮೇಶ್, ಬಸವರಾಜ್, ಮಧು, ನಾಗರಾಜ್
ಬೆರಳಚ್ಚು ತಜ್ಞರು , ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *