ಕೆರಗೋಡು ಹನುಮಧ್ವಜ ತೆರವು ವಿವಾದ/ ನಾಳೆ ಬಂದ್ ಆಗುತ್ತಾ ಮಂಡ್ಯ?

ಸಮಗ್ರ ನ್ಯೂಸ್: ಕೆರೆಗೋಡು ಹನುಮಧ್ವಜ ತೆರವು ವಿವಾದ ಹಾಗೆಯೇ ಮುಂದುವರಿದಿದ್ದು, ಫೆ. 9ಕ್ಕೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಮಂಡ್ಯ ಜಿಲ್ಲೆ ಹಾಗೂ ಕೆರೆಗೋಡು ಬಂದ್‍ಗೆ ಕರೆ ನೀಡಿದೆ. ಜಿಲ್ಲಾಡಳಿತ ಬಂದ್ ಮಾಡದಂತೆ ಮನವಿ ಮಾಡಿದರೂ ಕೂಡ ಮಣೆ ಹಾಕದ ಹಿಂದೂಪರ ಸಂಘಟನೆಗಳಿಗೆ, ಬಜರಂಗಸೇನೆ ಸೇರಿ ಹಲವು ಸಂಘಟನೆಗಳಿಂದ ಬಂದ್ ಗೆ ಬೆಂಬಲ ಸೂಚಿಸಲಾಗಿದೆ.

Ad Widget ... ..

ಫೆ. 7ರಂದು ಕರೆ ನೀಡಲಾಗಿದ್ದ ಬಂದ್ ಅನ್ನು ಮಂಡ್ಯ ಜಿಲ್ಲಾಡಳಿತದ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಅನ್ನು ಹಿಂಪಡೆದಿತ್ತು. ಆದರೆ ಇದೀಗ ಹಿಂದೂ ಹೋರಾಟಗಾರರ ಪಟ್ಟಿನಿಂದ ನಾಳೆ ಮತ್ತೆ ಮಂಡ್ಯ ಬಂದ್ ಬಹುತೇಕ ಖಚಿತ ಎನ್ನಲಾಗಿದೆ. ಇದರ ಜೊತೆಗೆ ಬಜರಂಗದಳ ಕರೆ ಕೊಟ್ಟ ಬಂದ್‍ಗೆ ಬಿಜೆಪಿ ಬೆಂಬಲ ಕೂಡ ಸಿಕ್ಕಿದೆ ಎನ್ನಲಾಗಿದೆ. ಇಂದು ಮಧ್ಯಾಹ್ನ ಈ ಕುರಿತು ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Ad Widget

Leave a Comment

Your email address will not be published. Required fields are marked *