ಜನರನ್ನು ಕಂಡು ಕದ್ದಿದ್ದ ಹಣವನ್ನು ಬಿಟ್ಟು ಎದ್ನೊ ಬಿದ್ನೊ ಓಡಿಹೋದ ಖದೀಮರು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕಳ್ಳರ ಹಾವಳಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಇಂತಹದೆ ಒಂದು ಘಟನೆ ನಡೆದಿದೆ. ಹೌದು ದೇಗುಲದಲ್ಲಿ ಕಳ್ಳತನ ಮಾಡುತ್ತಿದ್ದಂತೆ ಜನರನ್ನು ನೋಡಿ ಕಳ್ರು ಎದ್ನೊ ಬಿದ್ನೊ ಅಂತಾ ಓಡಿ ಹೋದ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

Ad Widget ... ..

ಮಧ್ಯರಾತ್ರಿ ಸಮಯ ಬೇರೆ ದೇವಸ್ಥಾನದ ಹಣ ಕದ್ದು ದೇವನಹಳ್ಳಿ ತಾಲೂಕಿನ ಗೋಪಸಂದ್ರ ಗ್ರಾಮದ ಮಾರಮ್ಮ ಬಳಿಯಿರುವ ಪೂಜಮ್ಮ ದೇವಾಲಯವನ್ನ ಕಳ್ಳತನ ಮಾಡಲು ಖದೀಮರು ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಜನರು ಬರುತ್ತಿದ್ದನ್ನು ಕಂಡು ಕದ್ದಿದ್ದ ದೇಗುಲದ ಬಳಿಯೇ 20 ಸಾವಿರಕ್ಕೂ ಅಧಿಕ ಹಣ ಹಾಗೂ ಚಿಲ್ಲರೆ, ಜೊತೆಗೆ ಬೈಕ್​ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಪಲ್ಸರ್​ ಬೈಕ್​ನಲ್ಲಿ ದೇವಸ್ಥಾನಕ್ಕೆ ಬಂದಿದ್ದ ಖದೀಮರು, ಸ್ಥಳದಲ್ಲಿಯೇ ಹಣ ಬಿಟ್ಟು ಪರಾರಿಯಾಗಿದ್ದು, ಸ್ಥಳೀಯರು ನಗದು ಹಾಗೂ ಬೈಕ್​ನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ad Widget

Leave a Comment

Your email address will not be published. Required fields are marked *