ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಅಕ್ಕಿಗೆ ನಿನ್ನೆಯಿಂದ ಚಾಲನೆ ದೊರಕಿದೆ. ಕೆಜಿ ಭಾರತ್ ಬ್ರ್ಯಾಂಡ್ ಅಕ್ಕಿಗೆ 29 ರೂ.ದರ ನಿಗದಿ ಮಾಡಲಾಗಿದು, 5, 10 ಕೆಜಿ ಬ್ಯಾಗ್ ಗಳಲ್ಲಿ ಭಾರತ್ ಅಕ್ಕಿ ಲಭ್ಯವಾಗುತ್ತಿದೆ.
ನಿನ್ನೆ ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದರು. ಅದರಂತ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಬಿಜೆಪಿ ಯುವ ಮೋರ್ಚಾ ಘಟಕದಿಂದ ಭಾರತ್ ಅಕ್ಕಿ ವಿತರಣೆ ಮಾಡಲಾಗಿದ್ದು, ಪ್ರತಿ ಕೆಜಿಗೆ 29ರೂ ನಂತೆ ಹತ್ತು ಕೆಜಿ ಅಕ್ಕಿಯ ಬ್ಯಾಗ್ ವಿತರಿಸಲಾಗಿದೆ. ಈ ವೇಳೆ ಅಕ್ಕಿ ಪಡೆಯಲು ಜನರ ನೂಕು ನುಗ್ಗಲು ನಿರ್ಮಾಣವಾಗಿದ್ದು, ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಅಕ್ಕಿ ಖಾಲಿಯಾಗಿದೆ.