ಸಮಗ್ರ ನ್ಯೂಸ್: ಅಕ್ಷಯ ಬಾಬ್ಲು ಬೆಟ್ಟು ಹನುಮಾನಾಸನದಲ್ಲಿ 50 ನಿಮಿಷ 20 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮತ್ತು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಇದರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫೆ. 5ರಂದು ಸಂತೃಪ್ತಿ ಸಭಾಭವನ ಏನೇಕಲ್ಲಿನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಂದರ ಗೌಡ ನೆರವೇರಿಸಿದರು. ಶಾಲಾ ಗುರುಗಳಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಗತಿ ಪರ ಕೃಷಿಕ ರೇಗಪ್ಪ ಗೌಡ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭವ್ಯ ಜೇನುಕೋಡಿ, ಏನೇಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಣಧಿಕಾರಿ ರತನ್ ಕಲ್ಕುದಿ, ಏನೇಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳು ಚಂದ್ರಿಕಾ, ಶಿಕ್ಷಕಿ ಅಂಬಿಕಾ, ಗುತ್ತಿಗಾರು ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ ಮತ್ತು ಅಮರ ಯೋಗ ಕೇಂದ್ರದ ಶಿಕ್ಷಕ ಶರತ್ ಮರ್ಗಿಲಡ್ಕ, ಮತ್ತು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಕ್ಷಯ ಬಾಬ್ಲುಬೆಟ್ಟು ಅವರಿಂದ ಯೋಗ ಪ್ರದರ್ಶನ ನೀಡಲಾಯಿತು. ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲಿನಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮೋಹನ್ ಮತ್ತು ದಿವ್ಯ ರವರ ಪುತ್ರಿ. ನಿರಂತರ ಯೋಗ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.