Ad Widget .

ಇಂಡೋನೇಷ್ಯದಲ್ಲಿ ಕೋವಿಡ್ ಸ್ಫೋಟ | ಆಪತ್ತಿನಲ್ಲಿ ಆಮ್ಲಜನಕ ಆಪತ್ಭಾಂದವ

ಜಕಾರ್ತಾ: ಜನಸಂಖ್ಯೆಯಲ್ಲಿ ಪ್ರಪಂಚದ ನಾಲ್ಕನೇ ದೊಡ್ಡ ರಾಷ್ಟ್ರ ಇಂಡೋನೇಷಿಯಾದಲ್ಲಿ ಇದೀಗ ಕೋವಿಡ್ ಸ್ಫೋಟ ಸಂಭವಿಸಿದ್ದು ಆಮ್ಲಜನಕದ ಕೊರತೆ ಎದುರಾಗಿದೆ. ಕೋರಿಕೆಗೆ ತಕ್ಷಣ ಸ್ಪಂದಿಸಿರುವ ಸಿಂಗಾಪುರ ಮತ್ತು ಆಸ್ಟ್ರೇಲಿಯಾ ಇಂಡೋನೇಷಿಯಾದ ನೆರವಿಗೆ ನಿಂತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಿಂಗಾಪುರ 1,000 ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಇಂಡೋನೇಷ್ಯಾಗೆ ಕಳುಹಿಸಿಕೊಟ್ಟಿದೆ. ಜೊತೆಗೆ ಅಷ್ಟೇ ಪ್ರಮಾಣದ ನೆರವನ್ನು ಆಸ್ಟ್ರೇಲಿಯಾ ಇಂಡೋನೇಷ್ಯಾಕ್ಕೆ ತಲುಪಿಸಿದೆ. ಈ ನಡುವೆ ಸಿಂಗಾಪುರದಿಂದ 36,000 ಟನ್‌ ಆಮ್ಲಜನಕ ಮತ್ತು ಆಮ್ಲಜನಕ ಉತ್ಪಾದಿಸುವ 10,000 ಕಾನ್ಸೆಂಟ್ರೇಟರ್‌ ಉಪಕರಣಗಳನ್ನು ಖರೀದಿಸಲು ಇಂಡೋನೇಷ್ಯಾ ಮುಂದಾಗಿದೆ.

Ad Widget . Ad Widget . Ad Widget .

ಜನಸಂಖ್ಯೆಯಲ್ಲಿ ಪ್ರಪಂಚದ ದೊಡ್ಡ ರಾಷ್ಟ್ರಗಳಲ್ಲಿ ನಮ್ಮ ದೇಶವು ಒಂದಾಗಿದೆ. ಜನಸಂಖ್ಯೆ ಹೆಚ್ಚು ಇರುವುದರಿಂದ ಸದ್ಯ ಕೋವಿಡ್ ಪಾಸಿಟಿವಿಟಿ ದರ ಗಣನೀಯ ಹೆಚ್ಚಾಗಿದೆ. ಆಮ್ಲಜನಕದ ಕೊರತೆ ಎದುರಾಗಿದೆ. ಚೀನಾ, ಅಮೆರಿಕಾ ಮತ್ತು ಅರಬ್‌ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇತರ ದೇಶಗಳು ನೆರವು ನೀಡುವ ಭರವಸೆ ಇದೆ ಎಂದು ಕೋವಿಡ್‌ ನಿರ್ವಹಣಾ ಸಚಿವ ಲುಹುಟ್‌ ಬಿನ್‌ಸಾರ್‌ ಪಂಡ್‌ಜೈತನ್‌ ತಿಳಿಸಿದ್ದಾರೆ.

ಕಳೆದ ಎರಡು ಮೂರು ತಿಂಗಳ ಹಿಂದೆ ಭಾರತದಲ್ಲಿ ಆಮ್ಲಜನಕದ ತುರ್ತುಪರಿಸ್ಥಿತಿ ಎದುರಾದಾಗ ಇಂಡೋನೇಷಿಯಾ ಬೃಹತ್ ಪ್ರಮಾಣದಲ್ಲಿ ನೆರವು ನೀಡಿತ್ತು.

Leave a Comment

Your email address will not be published. Required fields are marked *