ಜಾರ್ಖಂಡ್‍ಗೆ ನೂತನ ಮುಖ್ಯಮಂತ್ರಿ/ ಬಹುಮತ ಸಾಬೀತುಪಡಿಸಿದ ಚಂಪೈ ಸೊರೇನ್

ಸಮಗ್ರ ನ್ಯೂಸ್: 81 ಶಾಸಕರ ಪೈಕಿ 47 ಶಾಸಕರ ಬೆಂಬಲ ಪಡೆಯುವ ಮೂಲಕ ಜಾಖರ್ಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಬಹುಮತ ಘೋಷಿಸಿದ ಬೆನ್ನಲ್ಲೇ ಶಾಸಕರು ಹರ್ಷೋದ್ಗಾರಗಳೊಂದಿಗೆ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.

Ad Widget ... ..

ಪ್ರಸ್ತುತ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಹೇಮಂತ್ ಸೊರೇನ್ ಅವರು ಸೋಮವಾರದ ಜಾರ್ಖಂಡ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹಾಜರಾಗಿದ್ದರು. ಪಿಎಂಎಲ್‍ಎ ನ್ಯಾಯಾಲಯವು ಅದರಲ್ಲಿ ಭಾಗವಹಿಸಲು ಅನುಮತಿ ನೀಡಿದ ನಂತರ ಮತ ಚಲಾಯಿಸಲು ವಿಧಾನಸಭೆಗೆ ಆಗಮಿಸಿದ್ದರು.

Ad Widget

Leave a Comment

Your email address will not be published. Required fields are marked *