ಸಮಗ್ರ ಉದ್ಯೋಗ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್, ಸೀನಿಯರ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 4, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಅಧಿಕೃತ ವೆಬ್ಸೈಟ್www.pnbindia.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಹುದ್ದೆಯ ಮಾಹಿತಿ:
ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ -1
ಸೀನಿಯರ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್- 7
ವಯೋಮಿತಿ:
ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ – 60 ವರ್ಷ
ಸೀನಿಯರ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್- 58 ವರ್ಷ
ವೇತನ:
ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ – ವಾರ್ಷಿಕ ಪ್ಯಾಕೇಜ್ 22,38,000
ಸೀನಿಯರ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್- ವಾರ್ಷಿಕ ಪ್ಯಾಕೇಜ್ 18,60,000
ಉದ್ಯೋಗದ ಸ್ಥಳ:
ಬೆಂಗಳೂರು
ಶಿಲ್ಲಾಂಗ್
ಭೂಪಾಲ್
ಪುಣೆ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
https://www.pnbindia.in/Recruitments.aspx apply here