ಸಮಗ್ರ ನ್ಯೂಸ್: ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚೌಕನಗಾಳಾಯದಲ್ಲಿ ನಡೆದಿದೆ.
ಮೃತರು ದಾಂಡೇಲಿ ನಗರದ ರಾಕೇಶ್ ಮಹಾದೇವಪ್ಪ ಬಡಿಗೇರ, ರಿತೇಶ್ ಸುಬ್ರಹ್ಮಣ್ಯ ನಾಯರ್ ಹಾಗೂ ಕೃಷ್ಣ ವಣ್ಣುರಾಯ ಹರಿಜನ ಎಂದು ತಿಳಿದು ಬಂದಿದೆ. ಅತಿವೇಗದ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿದ್ದು, ಜೋಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.