Ad Widget .

ಕರ್ನಾಟಕದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಸಮಗ್ರ ನ್ಯೂಸ್: ನಾಳೆ 75ನೇ ಗಣರಾಜ್ಯೋತ್ಸವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ವಿಶಿಷ್ಟ ಸೇವೆಗಾಗಿ ಎಡಿಜಿಪಿ ಸೌಮೇಂದ್ರ ಮುಖರ್ಜಿ ಹಾಗೂ ಡಿವೈಎಸ್​ಪಿ ಸುಧೀರ್ ಮಹದೇವ್ ಹೆಗ್ಡೆಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇನ್ನೂ ಗಮನಾರ್ಹ ಸೇವೆಯನ್ನು ಗುರುತಿಸಿ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಐಜಿಪಿ ಪ್ರವೀಣ್ ಮಧುಕರ್ ಪವಾರ್, ಐಜಿಪಿ ರಮಣ್ ಗುಪ್ತಾ, ಎಎಸ್​​ಪಿ ಅನಿಲ್​​ಕುಮಾರ್.ಎಸ್, ಎಸಿಪಿ ಶಿವಗಂಗೆ ಪುಟ್ಟರಂಗಪ್ಪ, ಡಿವೈಎಸ್​​ಪಿ ರಘು ಕುಮಾರ್, ಎಸಿಪಿ ನಾರಾಯಣಸ್ವಾಮಿ, ಡಿವೈಎಸ್​​ಪಿ ಶ್ರೀನಿವಾಸ್ ರಾಜ್ ಬೆಟೋಲಿ, ಪೊಲೀಸ್​ ಇನ್ಸ್​​ಪೆಕ್ಟರ್​ ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಇನ್ಸ್​​ಪೆಕ್ಟರ್ ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್, ಸಬ್​ ಇನ್ಸ್​​ಪೆಕ್ಟರ್ ದಾದಾಪೀರ್ ಕಣ್ಣೂರ್ ಸಾಬ್, ವೈರಲೆಸ್ ಎಎಸ್​ಐ​ ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ ರಾಮ, ಎಸ್​​ಪಿ ಕಮಾಂಡೆಂಟ್ ಸಿಬ್ಬಂದಿ ನಾಗರಾಜ್ ಅಂಜಪ್ಪ, ಹೆಡ್​ ಕಾನ್ಸ್​ಟೇಬಲ್ ಸಿ.ವಿ.ಗೋವಿಂದರಾಜು, ಹೆಡ್​ ಕಾನ್ಸ್​ಟೇಬಲ್ ಮಣಿಕಂಠ ಮಂದರ್ ಬೈಲ್, ಎಎಸ್​ಐ​ ಸಮಂತ್.ಎಸ್, ಹೆಡ್​ ಕಾನ್ಸ್​ಟೇಬಲ್ ನರಸಿಂಹರಾಜು ಎಸ್.ಎನ್, ಎಸ್​ಐ ಪುಂಡಲಿಕ್ ಜೆ.ವಿ.ರಾಮರಾವ್ ನಾಯಕ್​ಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.

Ad Widget . Ad Widget . Ad Widget .

ಅದೇ ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ, ಗೃಹ ರಕ್ಷಕ ಮತ್ತು ಸಿವಿಲ್ ಡಿಫೆನ್ಸ್ & ಕರೆಕ್ಷನಲ್ ಸೇವೆಯ ಒಟ್ಟು 1132 ಸಿಬ್ಬಂದಿಗೆ ಶೌರ್ಯ / ಸೇವಾ ಪದಕಗಳನ್ನು ಘೋಷಣೆ ಮಾಡಲಾಗಿದೆ

Leave a Comment

Your email address will not be published. Required fields are marked *