ಜ.31ರಿಂದ ಬಜೆಟ್ ಅಧಿವೇಶನ/ ಫೆ.1ರಂದು ಮಧ್ಯಂತರ ಬಜೆಟ್

ಸಮಗ್ರ ನ್ಯೂಸ್: ಮೋದಿ ನೇತೃತ್ವದ ಈ ಸರ್ಕಾರದ ಕೊನೆಯ ಬಜೆಟ್ ಗೆ ದಿನಾಂಕ ನಿಗದಿಯಾಗಿದ್ದು, ಫೆ.1ರಂದು ಮಧ್ಯಂತರ ಬಜೆಟ್ ಹಾಗೂ ಜ.31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ.

Ad Widget ... ..

ಜ.31ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಸಂಸತ್‍ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುತ್ತಾರೆ. ಮರುದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.

Ad Widget

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗಳು ಇರುವ ಕಾರಣ ಅದರ ಮುಂಚಿನ ಬಜೆಟ್‍ನ್ನು ಮಧ್ಯಂತರ ಬಜೆಟ್ ಎನ್ನಲಾಗುತ್ತದೆ. ಚುನಾವಣೆ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜುಲೈ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ.

Leave a Comment

Your email address will not be published. Required fields are marked *