ಕಾಪು: ಮಳೆಗಾಲ ಕೆಸರು, ಬೇಸಿಗೆಯಲ್ಲಿ ಧೂಳು| ಇದು ರಸ್ತೆ ಪ್ರಯಾಣಿಕರ ಪಾಡು

ಸಮಗ್ರ ನ್ಯೂಸ್: ವರ್ಷವಿಡಿ ಧೂಳು ಇಲ್ಲವೇ ಕೆಸರಿನಿಂದ ತುಂಬಿದ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಸಂಕಷ್ಟಪಡಬೇಕಾದ ದುಸ್ಥಿತಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಅಗರ್ ದಂಡೆ ಕೇಂಜಿಬೈಲು ರಸ್ತೆ ಪ್ರಯಾಣಿಕರಿಗೆ ಎದುರಾಗಿದೆ.

Ad Widget ... ..

ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲದಲ್ಲಿ ಕೆಸರುಮಯ ರಸ್ತೆಯಾದರೆ ಬೇಸಿಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಇಲ್ಲಿನ ಜನ ವರ್ಷವಿಡೀ ಸಂಕಷ್ಟ ಪಡುವಂತ ಸ್ಥಿತಿ ಎದುರಾಗಿದೆ. ಸುಮಾರು 500 ಮೀಟರ್ ಉದ್ದದ ರಸ್ತೆ ಇದಾಗಿದ್ದು 100 ಮೀಟರ್ ಮಾತ್ರ ಕಾಂಕ್ರೀಟ್ ರಸ್ತೆಯಾಗಿದೆ.

Ad Widget

ವಯಸ್ಸಾದವರನ್ನು ಇಲ್ಲವೇ ಅನಾರೋಗ್ಯಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಕಷ್ಟಕರವಾಗಿದ್ದು, ಯಾವ ವಾಹನದವರು ಈ ರಸ್ತೆಯಲ್ಲಿ ಬರುವುದಕ್ಕೆ ಒಪ್ಪುವುದಿಲ್ಲ. ಆದ್ದರಿಂದ, ಈ ಕ್ಷೇತ್ರದ ಜನ ಪ್ರತಿನಿಧಿಗಳು ಉಳಿದ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

Leave a Comment

Your email address will not be published. Required fields are marked *