ಯಶ್ ಕಟೌಟ್ ಕಟ್ಟುವ ವೇಳೆ ಮೂವರು ಫ್ಯಾನ್ಸ್ ಸಾವು… ಘಟನಾ ಸ್ಥಳಕ್ಕೆ ಕೆಲವೇ ಕ್ಷಣಗಳಲ್ಲಿ ಯಶ್ ಭೇಟಿ

ಸಮಗ್ರ ನ್ಯೂಸ್: ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಸಂಭ್ರಮ. ಹುಟ್ಟು ಹಬ್ಬದ ದಿನವೇ ಯಶ್ ಗೆ ಶಾಕ್ ಸಿಕ್ಕಿದೆ. ದುರದೃಷ್ಟವಶಾತ್ ಅವರ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ.

Ad Widget ... ..

ಯಶ್ ಬರ್ತ್​ಡೇ ಪ್ರಯುಕ್ತ ಫ್ಲೆಕ್ಸ್ ಕಟ್ಟಲು ಹೋಗಿ ವಿದ್ಯುತ್ ಶಾಕ್ ಹೊಡೆದು ಅಭಿಮಾನಿಗಳು ಮೃತಪಟ್ಟಿದ್ದಾರೆ. ಯಶ್ ಅವರು ಇಂದು ವಿದೇಶದಿಂದ ವಿಶೇಷ ವಿಮಾನದ ಮೂಲಕ ಗ್ರಾಮಕ್ಕೆ ಭೇಟಿ ಕೊಟ್ಟು ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ‌.

Ad Widget

ಯಶ್ ಅಭಿಮಾನಿಗಳು ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನಮಂತ ಹರಿಜನ್ (21) ಮುರಳಿ ನಡವಿನಮನಿ (20) ಮತ್ತು ನವೀನ್ ಗಾಜಿ(19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಒಂದು ಬೆಳವಣಿಗೆ ಯಶ್ ಹಾಗೂ ಅವರ ಕುಟುಂಬಕ್ಕೂ ಶಾಕ್ ತಂದಿದೆ. ಯಶ್ ಅವರು ಈ ಹಿಂದೆಯೇ ಬರ್ತ್​ಡೇ ಆಚರಿಸಲ್ಲ ಎಂದಿದ್ದರು. ಶೂಟಿಂಗ್​ನಲ್ಲಿ ಬ್ಯುಸಿ ಇರುವುದರಿಂದ ಅಭಿಮಾನಿಗಳನ್ನು ಭೇಟಿಯಾಗುತ್ತಿಲ್ಲ ಎಂದೂ ಹೇಳಿದ್ದರು. ಆದರೆ ಇಂದು ಇಂತಹದೊಂದು ಅವಘಡ ನಡೆದು ಹೋಗಿದೆ.

ಸರ್ಕಾರದಿಂದ ಮೃತ ಕುಟುಂಬಕ್ಕೆ 2 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ. ನಟ ಯಶ್ ಕಾಲ್ ಮಾಡಿ ನನ್ನ ಜೊತೆ ಮಾತಾನಾಡಿದ್ರು ನಾನು ಗದಗಕ್ಕೆ ಹೋಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

Leave a Comment

Your email address will not be published. Required fields are marked *