Ad Widget .

10ರೂ. ನಾಣ್ಯಗಳನ್ನು ‘ಪ್ರಯಾಣಿಕ’ರಿಂದ ಸ್ವೀಕರಿಸುವಂತೆ ಸಾರಿಗೆ ಇಲಾಖೆ ‘ಆದೇಶ’

ಸಮಗ್ರ ನ್ಯೂಸ್: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ತಮ್ಮ ದಿನನಿತ್ಯದ ವಹಿವಾಟುಗಳಲ್ಲಿ ಯಾವುದೇ ಸಂಶಯವಿಲ್ಲದೆ ಬಳಸಬಹುದಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೇಂದ್ರ ಸರಕಾರವಾಗಲಿ, ಆರ್‌.ಬಿ.ಐ ಯಾಗಲಿ 10 ರೂ. ನಾಣ್ಯಗಳನ್ನು ನಿಷೇಧಿಸಿಲ್ಲ ಹಾಗೂ ಚಲಾವಣೆ ಹಿಂಪಡೆದಿಲ್ಲ. ಸಾರ್ವಜನಿಕರು ಸುಳ್ಳು ವದಂತಿಯಮ್ಮು ನಂಬದೆ 10ರೂ. ನಾಣ್ಯಗಳನ್ನು ಸ್ವೀಕರಿಸಬಹುದು ಮತ್ತು ಬಳಸಬಹುದು. 10ರೂ. ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್‌.ಬಿ.ಐ ಹಲವು ಬಾರಿ 10ರೂ. ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ. ಆದರೂ ಸಹ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ನಡುವೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10/-ರ ನಾಣ್ಯಗಳನ್ನು ಕೂಡ ಪ್ರಯಾಣಿಕರಿಂದ ಸ್ವೀಕರ ಮಾಡುವಂತೆ ಸುತ್ತೋಲೆಯನ್ನು ಹೊರಡಿಸಿದೆ. ಇದೇ ವೇಳೇ ಸುತ್ತೋಲೆಯಲ್ಲಿ ರೂ.10/-ರ ನಾಣ್ಯಗಳ ಚಲಾವಣೆಗಾಗಿ ಪ್ರಯಾಣಿಕರಿಂದ ಸ್ವೀಕರಿಸುವ ಕುರಿತು ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಅಂತ ತಿಳಿಸಿದ್ದಾರೆ.

Ad Widget . Ad Widget . Ad Widget .

Leave a Comment

Your email address will not be published. Required fields are marked *