ಸಮಗ್ರ ನ್ಯೂಸ್: ಎದೆಗೆ ಗುಂಡು ಹೊಡೆದುಕೊಂಡು ವಿದ್ಯಾರ್ಥೀಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ವಿಷು ಉತ್ತಪ್ಪ (19) ಎಂದು ಗುರುತಿಸಲಾಗಿದೆ. ಕೊಡಗು ಮೂಲದ ಮೃತ ವಿಷು ಉತ್ತಪ್ಪನ ತಂದೆ ತಮ್ಮಯ್ಯ ರೇಷನ್ ತರಲು ಹೋದಾಗ ಪುತ್ರ ವಿಷು ಉತ್ತಪ್ಪ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಎದೆಗೆ ಶೂಟ್ ಮಾಡಿಕೊಂಡು ತಂದೆಗೆ ಕರೆ ಮಾಡಿ ಇನ್ಮುಂದೆ ತಪ್ಪು ಮಾಡುವುದಿಲ್ಲ ಅಂತ ಹೇಳಿದ್ದಾನೆ ಎನ್ನಲಾಗಿದೆ.
ಈ ನಡುವೆ ಕೂಡಲೇ ಮನೆಗೆ ಬಂದ ತಮ್ಮಯ್ಯ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯವೇ ವಿಷು ಉತ್ತಪ್ಪ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ನಡುವೆ ಘಟನೆ ಸಂಬಂಧ ಮಾಧನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.