Ad Widget .

ನ್ಯೂ ಇಯರ್​ ಸೆಲೆಬ್ರೇಷನ್​ನಲ್ಲಿ ಮುಳ್ಳುಹಂದಿ ಮಾಂಸ, ಆಮೇಲಾಗಿದ್ದೇ ಅವಾಂತರ!

ಸಮಗ್ರ ನ್ಯೂಸ್: ಅತಿಥಿಗಳಿಗೆ ಮಾಂಸ ನೀಡಲು ಕಾಡುಪ್ರಾಣಿಗಳನ್ನು ಬೇಟೆಯಾಡಿದ ಖಾಸಗಿ ಎಸ್ಟೇಟ್ ನೌಕರರು ಹಾಗೂ ಅತಿಥಿಗಳನ್ನು ಇಡುಕ್ಕಿಯ ಶಾಂತನಪಾರಾದಲ್ಲಿ ಬಂಧಿಸಲಾಗಿದೆ. ಬೇಟೆಗೆ ಬಳಸುತ್ತಿದ್ದ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ. ಶಾಂತನಪಾರಾದ ಜಿಎ ತೋಟದಿಂದ ಮುಳ್ಳುಹಂದಿಯನ್ನು ಬೇಟೆಯಾಡಿ ಮಾಂಸ ತಿಂದಿದ್ದಾರೆ. ಬಳಿಕ ವಾಪಸ್ ಬರುವಾಗ ವಾಹನದಲ್ಲಿ ಮುಳ್ಳುಹಂದಿ ತೆಗೆದುಕೊಂಡು ಹೋಗಿದ್ದಾರೆ. ತಲಕೋಡು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ವಾಹನದಿಂದ ಮುಳ್ಳುಹಂದಿ ಪತ್ತೆಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಎಸ್ಟೇಟ್ ಪರಿಶೀಲನೆ ವೇಳೆ ಅರಣ್ಯ ಇಲಾಖೆ ಮುಳ್ಳುಹಂದಿ ಮಾಂಸ ಹಾಗೂ ಬೇಟೆಗೆ ಬಳಸುತ್ತಿದ್ದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಪೀರುಮೇಡುವಿನ ಎಸ್ಟೇಟ್ ಉದ್ಯೋಗಿ ಬೀನಾ, ಶಾಂತನಪರ ಪುತ್ತನ್‌ವೀಟ್‌ನ ವರ್ಗೀಸ್, ವಂಡಿಪೆರಿಯಾರ್‌ನ ಪುದುವೇಲ್ ಮನೋಜ್, ತಿರುವಳ್ಳ ಪಂಚಾಯತ್ ಮಠದ ರಮೇಶ್ ಕುಮಾರ್, ಅಜಂ ರಸೂಲ್ ಖಾನ್, ಅಸ್ಮುದ್ದೀನ್ ಎಚ್ ಮತ್ತು ತಿರುವನಂತಪುರದ ಇರ್ಷಾದ್ ಕೆಎಂ ಬಂಧಿತರು.

Ad Widget . Ad Widget . Ad Widget .

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎಸ್ಟೇಟ್ ನಲ್ಲಿ ಪ್ರಾಣಿಗಳ ಬೇಟೆ ದೊಡ್ಡ ಮಟ್ಟದಲ್ಲಿ ನಡೆದಿದೆಯೇ ಹಾಗೂ ಬೇರೆ ಬೇರೆ ಬೇಟೆ ತಂಡಗಳಿವೆಯೇ ಎಂಬ ಬಗ್ಗೆ ಅರಣ್ಯ ಇಲಾಖೆ ವಿವರವಾಗಿ ತನಿಖೆ ನಡೆಸುತ್ತಿದೆ.

Leave a Comment

Your email address will not be published. Required fields are marked *