Ad Widget .

ಭಿಕ್ಷೆ ಬೇಡುತ್ತಿದ್ದ ಬಾಲಕಿಯನ್ನೂ ಬಿಡದ ಕಾಮಾಂಧರು| ಮೈಸೂರಿನಲ್ಲಿ ಕೇರಳದ ಪ್ರವಾಸಿ ಯುವಕರ ತಂಡದಿಂದ ವಿಕೃತಿ

ಸಮಗ್ರ ನ್ಯೂಸ್: ಕೇರಳದಿಂದ ಬಂದ ನಾಲ್ಕು ಯುವಕರ ಗುಂಪೊಂದು ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ವೇಗವಾಗಿ ಹೋಗುವಾಗ ಗ್ರಾಮವೊಂದರಲ್ಲಿ ಕಾರು ಅಪಘಾತ ಮಾಡಿದ್ದು, ಅಲ್ಲಿ ಅಪ್ರಾಪ್ತ ಹುಡುಗಿ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೊಳ್ಳೇಗಾಲದ ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ರಾಜ್ಯದ ಗಡಿ ದಾಟಲು ಯತ್ನಿಸಿದ ಕೇರಳ ಮೂಲದ ನಾಲ್ವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಕಿಡಿಗೇಡಿಗಳ ಬಳಿ ಬಾಲಕಿ ಭಿಕ್ಷೆ ಬೇಡಲು ಬಂದಾಗ ಬಾಲಕಿಯನ್ನು ಅಪಹರಿಸಿ ಬಾಯಿಗೆ ಬಟ್ಟೆ ತುರುಕಿ ಕಾರಿನಲ್ಲಿ ಕೂರಿಸಿಕೊಂಡು ರಾಜ್ಯದ ಗಡಿ ದಾಟಲು ಮುಂದಾಗಿದ್ದಾರೆ.

Ad Widget . Ad Widget . Ad Widget .

ಕೇರಳದ ಮಲಪ್ಪುರಂನ ಈ ದುಷ್ಟರು ಪ್ರವಾಸಕ್ಕೆಂದು ಚಾಮರಾಜ ನಗರದಿಂದ ತಮಿಳುನಾಡಿಗೆ ಹೊರಟಿದ್ದರು. ದಾರಿ ಮಧ್ಯೆ ಅವರಿಗೆ ಕೊಳ್ಳೇಗಾಲದಲ್ಲಿ ಅಮಾಯಕಿಯಂತಿದ್ದ, ಭಿಕ್ಷೆ ಬೇಡುತ್ತಿದ್ದ ಬಾಲಕಿಯೊಬ್ಬಳು ಕಂಡಿದ್ದಾಳೆ. ಆಕೆಯ ಮೇಲೆ ಮೇಲೆ ಕಣ್ಣು ಹಾಕಿದ ದುಷ್ಟರು ಆಕೆಯನ್ನು ಯಾರಿಗೂ ಗೊತ್ತಾಗದಂತೆ ಕಾರಿನೊಳಗೆ ಎಳೆದುಕೊಂಡು ಅಪಹರಣ ಮಾಡಿದ್ದಾರೆ.

ನಾಲ್ವರು ಮುಸ್ಲಿಂ ಯುವಕರು ಹೀಗೆ ಬಾಲಕಿಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕವೂ ಕಾರು ಪರಾರಿ ಆಗಲು ಯತ್ನಿಸಿದಾಗ ಸ್ಥಳೀಯರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಬಾಲಕಿ ಇರುವುದು ಪತ್ತೆಯಾಗಿದೆ. ವಿಚಾರಿಸಿದಾಗ ಬಾಲಕಿಯನ್ನು ಅಪಹರಿಸಿರುವುದು ಗೊತ್ತಾಗಿದೆ. ಆಗ ಊರಿನವರು ಸೇರಿ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿ ನರಸೀಪುರ ಮೂಲದವಳಾಗಿದ್ದು, ಕೊಳ್ಳೇಗಾಲದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದಳು. ಇದೀಗ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ರಿಮ್ಯಾಂಡ್‌ ಹೋಮ್‌ಗೆ ಕಳುಹಿಸಿದ್ದಾರೆ.

ಅಪಹರಣಕ್ಕೆ ಯತ್ನಿಸಿದ ಕೇರಳದ ಮಲಪ್ಪುರಂ ಜಿಲ್ಲೆಯ ಈ ಕಿರಾತಕ ಯುವಕರನ್ನು ಆದಿಲ್. ಅಯೂಬ್ ಸಾದಿಕ್. ಉಮರ್ ಎಂದು ಗುರುತಿಸಲಾಗಿದೆ. ಇವರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಬಳಸಿದ್ದ ಕೆ ಎಲ್ 54 ಎಂ 6962 ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *