ಶಿಕಾರಿಗೆ ಕರೆದೊಯ್ದು ಗೆಳೆಯನನ್ನೇ ಬೇಟೆಯಾಡಿದರೇ…!? | ಸಾವಿನ ಸುತ್ತ ಅನುಮಾನದ ಹುತ್ತ

ಹಾಸನ: ಶಿಕಾರಿಗೆ ಕಾಡಿಗೆ ತೆರಳಿದ್ದ ವೇಳೆ ಸಹಚರರ ಗುಂಡೇಟಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಘಟನೆ ಬೆನ್ನಲ್ಲೇ ಸಹಚರರು ಪರಾರಿಯಾಗಿದ್ದು ಇದು ಕೊಲೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

Ad Widget ... ..

ಬೇಲೂರು ತಾಲೂಕಿನ ಕುಶಾವರ ಗ್ರಾಮದ ನಿವಾಸಿ ಮಧು (24) ಮೃತ ಯುವಕ. ಮಧು ತನ್ನ ಸ್ನೇಹಿತರೊಂದಿಗೆ ಶಿಕಾರಿಗೆ ತೆರಳುವುದಾಗಿ ಮನೆಯವರೊಂದಿಗೆ ಹೇಳಿಹೋಗಿದ್ದ. ಈ ಸಂದರ್ಭ ಕಲ್ಲಹಳ್ಳಿ ಕಾಡಿನಲ್ಲಿ ಮಿಸ್ ಫೈಯರ್ ಆಗಿ ಮಧು ತಲೆಗೆ ಗುಂಡೇಟು ಬಿದ್ದಿದೆ ಎನ್ನಲಾಗಿದೆ.

Ad Widget

ಗುಂಡು ತಗುಲಿ ಗಾಯಗೊಂಡ ಯುವಕನನ್ನು ಜೊತೆಗಿದ್ದವರು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮನೆಯವರು ಮತ್ತು ಸ್ಥಳೀಯರು ಯುವಕ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Leave a Comment

Your email address will not be published. Required fields are marked *