ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಭಹಿಷ್ಕಾರ ಮೂಲಕ ತಾಲೂಕಿನಲ್ಲಿ ಸಂಚಲನ ಮೂಡಿಸಿದ ವೇದಿಕೆ ಮತ್ತೆ ಹೋರಾಟಕ್ಕೆ ಸಜ್ಜುಗುತ್ತಿದೆ.
ವಿಧಾನ ಸಭಾ ಚುನಾವಣೆಯ ಸಂಧರ್ಭ, ಆರಂತೋಡಿನಿಂದ ಕನಿಷ್ಠ ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಮಾಡದೇ ಇದ್ದಲ್ಲಿ ಚುನಾವಣೆ ಬಹಿಸ್ಕಾರ ಮಾಡುವುದಾಗಿ, ಇಡೀ ತಾಲೂಕಿನಲ್ಲೇ ಸಂಚಲನ ಮೂಡಿಸಿದ್ದು, ವೇದಿಕೆಯು ಈ ಬಾರೀ ಲೋಕಸಭಾ ಚುನಾವಣೆ ಮೊದಲು, ಕಳೆದ ಚುನಾವಣೆ ಸಂದರ್ಭದಲ್ಲಿ ಪಿಂಡಿಮನೆಯಿಂದ ಅಡ್ತಲೆ ತನಕ ಸುಮಾರು 1:5 ಕಿ ಮೀ ನಷ್ಟು ರಸ್ತೆ ಅಭಿವೃದ್ಧಿಯನ್ನು ಚುನಾವಣೆ ಮುಗಿದ ನಂತರ ವೇದಿಕೆಯ ಬೇಡಿಕೆಯನ್ನು ಯನ್ನು ಈಡೇರಿಸುತ್ತೇವೆ ಎಂಬುದಾಗಿ ಭರವಸೆ ನೀಡಿದ್ದರು.
ನಂತರ, ಚುನಾವಣೆ ಭಹಿಸ್ಕಾರ ಹಿಂಪಡೆದು ಚುನಾವಣೆ ಸಂದರ್ಭ ಸಂಪೂರ್ಣ ಸಹಕಾರ ನೀಡಿದ್ದರಿಂದ ಅರಂತೋಡಿನಿಂದ ಅಡ್ತಲೆ ವರೆಗಿನ ಅಗಲೀಕರಣ ಗೊಂಡ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಹಾಗೂ ಮರಗಳನ್ನು ತೆಗಿಯುವ ಹಾಗೂ ಸುಮಾರು 3 ಕಿಮೀ ರಸ್ತೆ ಗೆ ಉಳಿದ ಎರಡನೆ ಕೋಟ್ ಡಾಮಾರಿಕರಣ ಗೊಳಿಸಲು ಸೂಚನೆ ನೀಡಲು, ಅಲ್ಲದೆ ವೇದಿಕೆಯ ಬೇಡಿಕೆಯ ಪಿಂಡಿಮನೆಯಿಂದ ಅಡ್ತಲೆ ತನಕ ಅಗಲೀಕರಣ ಗೊಳ್ಳಲು ಬಾಕಿ ಇರುವ ರಸ್ತೆಯನ್ನು ಮುಂದಿನ ಲೋಕಸಭಾ ಚುನಾವಣೆ ಮೊದಲು, ಸೂಕ್ತ ಅನುದಾನ ಒದಗಿಸಲು ಶಾಸಕರಾದ ಭಾಗೀರಥಿ ಮುರುಳ್ಯರಿಗೆ, ಊರಿನ ಸರ್ವರಿಗೂ ನಾಗರಿಕರ ಪರವಾಗಿ, ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಹಾಗೂ ಕಾರ್ಯದರ್ಶಿ ರಂಜಿತ್ ಅಡ್ತಲೆ ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ಶಾಸಕರು ಹಾಗೂ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರನ್ನು ಸ್ಥಳಕ್ಕೆ ಕರೆಯಿಸಿ, ಜ. 15 ರೊಳಗೆ ಎರಡನೇ ಕೋಟ್ ಡಾಮಾರಿಕರಣ ಪ್ರಾರಂಭ ಮಾಡಲು ಹಾಗೂ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವು ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಪಿಂಡಿಮನೆಯಿಂದ ಅಡ್ತಲೆ ತನಕ ರಸ್ತೆಯನ್ನು ಅಗಲೀಕರಣಗೊಳಿಸಲು ಆದಷ್ಟು ಬೇಗ ಸೂಕ್ತ ಅನುದಾನ ನೀಡಲು ಪ್ರಯತ್ನ ಮಾಡುತ್ತೇವೆ ಎಂಬುದಾಗಿ ಭರವಸೆ ನೀಡಿದರು. ಅಲ್ಲದೆ ರಸ್ತೆ ಬದಿ ಕುಸಿತ ಆಗಿರುವ ಕಡೆಗಳಲ್ಲಿ ಸೂಕ್ತ ತಡೆ ಗೋಡೆ ನಿರ್ಮಿಸಲು ಹರೀಶ್ ಕಂಜಿಪಿಲಿ ಸೂಚನೆ ನೀಡಿದರು. ಈ ಸಂದರ್ಭ ಬಿಜೆಪಿ ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ ಅವರು ಉಪಸ್ಥಿತರಿದ್ದರು.






