ಸಮಗ್ರ ನ್ಯೂಸ್: ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ಐಸಿವೈಎಂ, ಯುವ ಆಯೋಗ ಮತ್ತು ಪಾಲನಾ ಪರಿಷದ್ ಸಹಕಾರದೊಂದಿಗೆ ಡಿ.31 ರಂದು ಕ್ರಿಸ್ಮಸ್ ಸೌಹಾರ್ದಕೂಟ-2023 ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂತ ಬ್ರಿಜಿಡ್ಸ್ ಚರ್ಚ್ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಬ್ರಿಜೆಡ್ಸ್ ಚರ್ಚಿನ ಧರ್ಮ ಗುರುಗಳಾದ ರೆ|ಫಾ|ವಿಕ್ಟರ್ ಡಿಸೋಜಾ ವಹಿಸಿ, ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಎಂ ವೆಂಕಪ್ಪಗೌಡ, ಡೇವಿಡ್ ಧೀರಾ ಕ್ರಾಸ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಮಾದ್ಯಮ ವಿಭಾಗದಿಂದ ಪತ್ರಕರ್ತ ಹಸೈನಾರ್ ಜಯನಗರ, ಸಮಾಜ ಸೇವೆಯಲ್ಲಿ ಬಿ.ಕೇಶವ ಬಂಗ್ಲೆಗುಡ್ಡೆ, ಸಮಾಜ ಸೇವಕಿ ಅಪೋಲಿನ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ವತಿಯಿಂದ ಹಸೈನಾರ್ ಜಯನಗರ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಮಚಾದೋ ಜಯನಗರ, ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಬಿನೋಮಾ, ಸಿಸ್ಟರ್ ಅಂತೋನಿ ಮೇರಿ, ಪಾಲನಾ ಸಮಿತಿ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ, ಕೆಥೋಲಿಕ್ ಸುಳ್ಯ ಘಟಕದ ಅಧ್ಯಕ್ಷ ಗೋಡ್ ಫ್ರೀ ಮೊಂತೇರೋ, ಐಸಿವೈಎಂ(ICYM) ಅಧ್ಯಕ್ಷ ಜೋಯ್ ಟೋನಿ ಡಿಸೋಜ, ವೈಸಿಎಸ್(YCS) ಅಧ್ಯಕ್ಷ ಆಂಡ್ರು ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.
ಕ್ರಿಸ್ಮಸ್ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಆಟೋ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಸನ್ಮಾನ ಕಾರ್ಯಕ್ರಮದ ಬಳಿಕ ನೂತನ ವರ್ಷದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಿತು. ಸ್ಥಳೀಯ ನೂರಾರು ಕ್ರಿಶ್ಚಿಯನ್ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ನವೀನ್ ಮಚಾದೋ ಜಯನಗರ ಸ್ವಾಗತಿಸಿ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ತ ವಂದಿಸಿ, ಯುವ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮ ನಿರೂಪಿಸಿದರು.






