ದ್ವಾದಶ ರಾಶಿಗಳ ವರ್ಷಭವಿಷ್ಯ

ಸಮಗ್ರ ನ್ಯೂಸ್: 2023ರ ಕ್ಯಾಲೆಂಡರ್ ಬದಲಾಗಿ 2024ರ ಹೊಸ ಕ್ಯಾಲೆಂಡರ್ ಗೋಡೆ ಮೇಲೆ ಬಿದ್ದಿದೆ. ಈ ವರ್ಷದಲ್ಲಿ ಯಾವ ರಾಶಿಯವರಿಗೆ ಏನು ಲಾಭ, ಫಲಾಫಲಗಳು ಏನು ಎಂಬುದನ್ನು ನೋಡೋಣ ಬನ್ನಿ…

Ad Widget ... ..

ಮೇಷ:
ಮೇಷ ರಾಶಿಯವರು ತಮ್ಮ ಕುರಿತು ಕಾಳಜಿ ವಹಿಸುವುದನ್ನು ಮತ್ತು ಸಾಕಷ್ಟು ಸಕ್ರಿಯರಾಗುವುದನ್ನು ಇಷ್ಟಪಡುತ್ತಾರೆ. ಈ ವರ್ಷದ ಆರಂಭದಲ್ಲಿ ಗುರುವು ನಿಮ್ಮ ರಾಶಿಯಲ್ಲಿದ್ದು ಶನಿಯು ಹನ್ನೊಂದನೇ ಮನೆಯಲ್ಲಿರುತ್ತಾನೆ. ಹೀಗಾಗಿ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗುತ್ತದೆ. ಸರಿಯಾದ ಆಯ್ಕೆಯನ್ನು ಮಾಡಿಕೊಂಡರೆ ಬದುಕಿನಲ್ಲಿ ಮುಂದೆ ಸಾಗಬಹುದು. ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬದುಕುಗಳೆರಡರಲ್ಲೂ ಸರಿಯಾದ ಆಯ್ಕೆಯನ್ನು ಮಾಡಿಕೊಂಡರೆ ಬದುಕಿನಲ್ಲಿ ನೀವು ಮುಂದೆ ಸಾಗಬಹುದು. ದಿನ ಕಳೆದಂತೆ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಆದರೆ ಅತಿಯಾದ ಆತ್ಮವಿಶ್ವಾಸವು ನಿಮ್ಮ ಹಾದಿ ತಪ್ಪಿಸದಂತೆ ನೋಡಿಕೊಳ್ಳಿ. ಹನ್ನೆರಡೆಯ ಮನೆಯಲ್ಲಿರುವ ರಾಹುವು ಸಮಸ್ಯೆಗಳನ್ನುಂಟು ಮಾಡಿದರೂ ಸರ್ಕಾರವು ನಿಮ್ಮನ್ನು ಬೆಂಬಲಿಸಲಿದೆ. ಸದ್ಯಕ್ಕೆ ನೀವು ನಿಮ್ಮ ಆರೋಗ್ಯಕ್ಕೆ ಗಮನ ನೀಡಬೇಕು. ಆರೋಗ್ಯವನ್ನು ಕಡೆಗಣಿಸಿದರೆ ನೀವು ಆಸ್ಪತ್ರೆಗೆ ಭೇಟಿ ನೀಡಬೇಕಾದೀತು. ಅಲ್ಲದೆ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಅನಗತ್ಯ ಖರ್ಚುವೆಚ್ಚಗಳ ಕುರಿತು ನಿಗಾ ವಹಿಸಿ. ಇಲ್ಲದಿದ್ದರೆ ಸಮಸ್ಯೆಗಳುಂಟಾಗಬಹುದು. ಈ ವರ್ಷದಲ್ಲಿ ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ನೀವು ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಆಸೆ ಆಕಾಂಕ್ಷೆಗಳು ಈಡೇರುವ ಕಾರಣ ಮನಸ್ಸಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಪ್ರೇಮಿಯನ್ನು ಸಂತಸಪಡಿಸಲು ಸಾಕಷ್ಟು ಪ್ರಯತ್ನಿಸಲಿದ್ದೀರಿ. ಅವರ ಮನಸ್ಸನ್ನು ಗೆಲ್ಲುವುದಕ್ಕಾಗಿ ಆಕರ್ಷಕ ಉಡುಗೊರೆಯನ್ನು ನೀಡಲಿದ್ದೀರಿ. ನಿಮ್ಮ ತಂದೆಯ ಜೊತೆಗಿನ ಸಂಬಂಧದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ಆದರೆ ಪವಾಡಸದೃಶವಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲಿದ್ದೀರಿ ಹಾಗೂ ಹಣಕಾಸಿನ ಹಿನ್ನಡೆಯಿಂದಾಗಿ ಸೋಲನ್ನು ಒಪ್ಪಿಕೊಳ್ಳದೆ ಮುಂದೆ ಸಾಗಲಿದ್ದೀರಿ. ಬಾಕಿ ಉಳಿದಿರುವ ನಿಮ್ಮ ಎಲ್ಲಾ ಯೋಜನೆಗಳು ಈ ವರ್ಷದಲ್ಲಿ ಪೂರ್ಣಗೊಳ್ಳಲಿವೆ. ನಿಮ್ಮ ಪ್ರಣಯ ಬದುಕಿನ ಕುರಿತು ನಿಮಗೆ ಶುಭ ಸುದ್ದಿ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿಗೆ ಈ ವರ್ಷವು ಅನುಕೂಲಕರವಾಗಿದೆ. ನಿಮ್ಮ ಅತ್ತೆ ಮಾವಂದಿರು ನಿಮಗೆ ಸಾಕಷ್ಟು ನೆರವು ಒದಗಿಸಲಿದ್ದಾರೆ. ಈ ವರ್ಷದಲ್ಲಿ ನಿಮ್ಮ ಆರೋಗ್ಯಕ್ಕೆ ನೀವು ಸಾಕಷ್ಟು ಆದ್ಯತೆ ನೀಡಬೇಕು. ಉಳಿದೆಲ್ಲ ಸಮಸ್ಯೆಗಳು ತಾನಾಗಿಯೇ ಬಗೆಹರಿಯಲಿವೆ. ನಿಮ್ಮ ಪ್ರಣಯ ಬದುಕಿನ ಕುರಿತು ಹೇಳುವುದಾದರೆ, ನಿಮ್ಮ ಸಂಗಾತಿಯನ್ನು ಮಾತ್ರವೇ ನೀವು ಪ್ರೀತಿಸಬೇಕು. ಇಲ್ಲದಿದ್ದರೆ ಎಲ್ಲರಿಗೆ ನೋವುಂಟಾಗಲಿದೆ.

Ad Widget

ವೃಷಭ:
ವೃಷಭ ರಾಶಿಯಲ್ಲಿ ಜನಿಸಿದ ಜನರು 2024ರಲ್ಲಿ ವಿಶೇಷ ಅನುಭವವನ್ನು ಪಡೆಯಲಿದ್ದಾರೆ. ಪೂರ್ಣಗೊಳಿಸಬೇಕಾದ ಕೆಲಸದಲ್ಲಿ ಯಾವುದೇ ಸಮಸ್ಯೆ ಉಂಟಾದಂತೆ ನೋಡಿಕೊಳ್ಳುವುದಕ್ಕಾಗಿ ನಿಮ್ಮ ಕ್ರೋಧವನ್ನು ನಿಯಂತ್ರಿಸಲು ನೀವು ಈ ವರ್ಷದಲ್ಲಿ ವಿಶೇಷ ಒತ್ತು ನೀಡಬೇಕು. ಈ ವರ್ಷದ ಆರಂಭದಲ್ಲಿ ನೀವು ಮಾನಸಿಕ ಒತ್ತಡವನ್ನು ಅನುಭವಿಸಲಿದ್ದು, ಇಡೀ ವರ್ಷದಲ್ಲಿ ಖರ್ಚುವೆಚ್ಚಗಳು ನಿಮ್ಮನ್ನು ಬಾಧಿಸಲಿವೆ. ಸಾಕಷ್ಟು ಮುಂಚಿತವಾಗಿಯೇ ನೀವು ಸಿದ್ಧರಾಗಬೇಕು ಮತ್ತು ಯಾವುದೇ ಅಡಚಣೆಗಳು ಎದುರಾದರೂ ಗುರಿಯಿಂದ ಹಿಂದಕ್ಕೆ ಸರಿಯಬಾರದು. ಈ ವರ್ಷದಲ್ಲಿ ನೀವು ಗೌರವಯುತ ಸಂಬಳವನ್ನು ಗಳಿಸಲಿದ್ದೀರಿ. ನಿಮ್ಮ ಹೃದಯದ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ. ಮನೆಯ ಹಿರಿಯರು ನಿಮಗೆ ಮುಕ್ತ ಮನಸ್ಸಿನ ಬೆಂಬಲವನ್ನು ನೀಡಲಿದ್ದಾರೆ. ನೀವು ಪೋಷಕರ ವ್ಯವಹಾರವನ್ನು ನಡೆಸಿದರೆ ನಿಮಗೆ ಯಶಸ್ಸು ದೊರೆಯಲಿದೆ. ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳು ಆಸ್ತಿಯನ್ನು ಖರೀದಿಸಲು ಸೂಕ್ತ. ಈ ವರ್ಷದಲ್ಲಿ ಪ್ರೇಮ ಜೀವನವು ಚೆನ್ನಾಗಿರಲಿದೆ. ಈ ವರ್ಷದಲ್ಲಿ ವಿದೇಶಕ್ಕೆ ಪ್ರಯಾಣ ಮಾಡುವ ಅವಕಾಶ ನಿಮಗೆ ಲಭಿಸಬಹುದು. ನೀವು ಪ್ರಯಾಣಿಸಲು ಇಚ್ಛಿಸುವುದಾದರೆ ಆದಷ್ಟು ಬೇಗನೇ ವೀಸಾಕ್ಕಾಗಿ ಅರ್ಜಿ ಸಲ್ಲಿಸುವುದು ಒಳ್ಳೆಯದು. ವಿದೇಶಕ್ಕೆ ಹೋಗಿ ಸರಿಯಾದ ರೀತಿಯಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಸಫಲರಾಗಲಿದ್ದೀರಿ. ನಿಮ್ಮ ಕುರಿತು ಕಾಳಜಿ ವಹಿಸಿ. ಏಕೆಂದರೆ ಈ ವರ್ಷವು ನಿಮ್ಮ ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಚೆನ್ನಾಗಿಲ್ಲ. ಈ ವರ್ಷದ ನಂತರದ ದಿನಗಳಲ್ಲಿ ಮಕ್ಕಳ ಆರೋಗ್ಯ ಹದಗೆಡಬಹುದು. ಹೀಗಾಗಿ ಅವರನ್ನು ಗಮನಿಸುತ್ತಲೇ ಇರಿ. ಈ ವರ್ಷದ ಮಾರ್ಚ್‌ ಮತ್ತು ಆಗಸ್ಟ್‌ ತಿಂಗಳಿನ ನಡುವೆ ಕುಟುಂಬದ ಯಾರಾದರೂ ಹಿರಿ ಸದಸ್ಯರು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಸಾಕಷ್ಟು ವೈದ್ಯಕೀಯ ವೆಚ್ಚ ಹಾಗೂ ಆಸ್ಪತ್ರೆಯಲ್ಲಿ ತಂಗಬೇಕಾದ ಅನಿವಾರ್ಯತೆ ಉಂಟಾಗಬಹುದು. ಎಚ್ಚರಿಕೆಯಿಂದ ಇದ್ದರೆ ಸಾಕಷ್ಟು ಸಮಸ್ಯೆಗಳನ್ನು ತಪ್ಪಿಸಬಹುದು. ಈ ಕುರಿತು ಗಮನಹರಿಸಿ. ಈ ವರ್ಷದಲ್ಲಿ ನಿಮ್ಮ ಜನ್ಮ ಸ್ಥಳದಿಂದ ದೂರವಿರುವ ಕಡೆಯಲ್ಲಿ ನೀವು ಮನೆಯನ್ನು ಖರೀದಿಸಲು ಇಚ್ಛಿಸುವುದಾದಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿರಲಿದೆ.

ಮಿಥುನ:
ಮಿಥುನ ರಾಶಿಯಲ್ಲಿ ಜನಿಸಿದವರು ಈ ವರ್ಷದ ಆರಂಭದಲ್ಲಿ ಒಂದಷ್ಟು ಕೋಪವನ್ನು ತೋರಬಹುದು. ಸಂಬಂಧವನ್ನು ಸರಿಯಾಗಿ ಅರಿತುಕೊಳ್ಳಲು ಸಾಧ್ಯವಾಗದ ಕಾರಣ ನೀವು ಆಗಾಗ್ಗೆ ಸಮಸ್ಯೆಯನ್ನು ಎದುರಿಸಬಹುದು. ನಿಮ್ಮ ವೈವಾಹಿಕ ಸಂಬಂಧಕ್ಕೆ ಒಂದಷ್ಟು ಸಮಯವಕಾಶವನ್ನು ನೀಡಿರಿ. ಇಲ್ಲದಿದ್ದರೆ ನಿಮ್ಮ ಸಂಗಾತಿಯ ಕೋಪಕ್ಕೆ ನೀವು ಬಲಿಯಾಗಬಹುದು. ಇದನ್ನು ಎದುರಿಸುವುದು ನಿಮ್ಮ ಪಾಲಿಗೆ ಕಷ್ಟಕರವಾದೀತು. ನಿಮ್ಮ ಜೀವನ ಸಂಗಾತಿಯ ಒಡಹುಟ್ಟಿದವರು ಸೇರಿದಂತೆ ನಿಮ್ಮ ಅತ್ತೆ ಮನೆಯವರು ನಿಮ್ಮ ನೆರವಿಗೆ ಧಾವಿಸಬಹುದು ಮತ್ತು ಅದೃಷ್ಟವನ್ನು ದಯಪಾಲಿಸಬಹುದು. ಅವರೊಂದಿಗೆ ಸಹಯೋಗದೊಂದಿಗೆ ನೀವು ಯಶಸ್ಸನ್ನು ಗಳಿಸಬಹುದು. ಈ ವರ್ಷದಲ್ಲಿ ವಿದೇಶಕ್ಕೆ ಪ್ರಯಾಣ ಮಾಡುವ ಸಾಕಷ್ಟು ಅವಕಾಶಗಳು ನಿಮಗೆ ಲಭಿಸಬಹುದು. ಈ ವರ್ಷದಲ್ಲಿ ವಿದೇಶಕ್ಕೆ ಪ್ರಯಾಣಿಸುವ ನಿಮ್ಮ ಮಹತ್ಮಾಕಾಂಕ್ಷೆಯು ಈಡೇರಬಹುದು. ವಿದೇಶದ ವ್ಯವಹಾರವು ಲಾಭದಾಯಕ ಎನಿಸಲಿದೆ. ಅಂತರಾಷ್ಟ್ರೀಯ ಸಂಪರ್ಕಗಳ ಮೂಲಕ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗಬಹುದು ಹಾಗೂ ನಿಮ್ಮ ಬದುಕಿಗೆ ಸಂಪತ್ತನ್ನು ಕರುಣಿಸಬಹುದು. ನಿಮ್ಮ ಒಡಹುಟ್ಟಿದವರು ನಿಮ್ಮನ್ನು ಪ್ರೀತಿಸುತ್ತಾರೆ. ಆದರೆ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಕ್ಷೋಭೆ ಕಾಣಿಸಿಕೊಳ್ಳಬಹುದು. ಕೌಟುಂಬಿಕ ಸಂತಸದಲ್ಲಿ ಕುಂಠಿತ ಉಂಟಾಗಬಹುದು. ನೀವು ಕೆಲಸದಲ್ಲಿ ನಿರತರಾಗುವ ಕಾರಣ ಕುಟುಂಬಕ್ಕೆ ಸಮಯವನ್ನು ನೀಡಲು ನಿಮಗೆ ಕಷ್ಟಕರವಾದೀತು. ಅಡ್ಡಿಅತಂಕಗಳನ್ನು ನಿವಾರಿಸಿ ಮುಂದೆ ಸಾಗಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮನ್ನು ಸಾಕಷ್ಟು ಕಾಡುವ ಸಮಸ್ಯೆಯನ್ನು ಬಗೆಹರಿಸುವ ವಿಚಾರದಲ್ಲಿ ಗೆಳೆಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ ಅವರು ತಮ್ಮ ಅಧ್ಯಯನ ಕ್ಷೇತ್ರದಲ್ಲಿ ವಿಶೇಷಜ್ಞರ ನೆರವನ್ನು ಪಡೆಯಲಿದ್ದಾರೆ. ನೀವು ಒಂದಷ್ಟು ಯಶಸ್ಸನ್ನು ಗಳಿಸಲಿದ್ದೀರಿ. ನೀವು ಕೆಲಸ ಮಾಡಲು ಇಚ್ಛಿಸುವ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ನಿಮಗೆ ಸಾಧ್ಯವಾಗುತ್ತದೆ. ಈ ವರ್ಷದ ಮಧ್ಯದಲ್ಲಿ ನಿಮ್ಮ ಪೋಷಕರ ಆರೋಗ್ಯದ ಕುರಿತ ಚಿಂತೆಯು ನಿಮ್ಮನ್ನು ಕಾಡಬಹುದು. ಆದ್ದರಿಂದ ಅವರ ಆರೈಕೆಗೆ ಹೆಚ್ಚಿನ ಗಮನ ನೀಡಿ ಆತಂಕವನ್ನು ದೂರ ಮಾಡಿರಿ. ನಿಮ್ಮ ಒಡಹುಟ್ಟಿದವರ ಜೊತೆಗೆ ನಿಮ್ಮ ಸಹೋದ್ಯೋಗಿಗಳು ಸಹ ನಿಮಗೆ ಸಹಾಯ ಮಾಡುತ್ತಾರೆ. ಆದರೆ ಅತಿಯಾದ ಆತ್ಮವಿಶ್ವಾಸವನ್ನು ತೋರಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಸಮಸ್ಯೆ ಉಂಟಾದೀತು.

ಕರ್ಕಾಟಕ:
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವಿಪರೀತ ಸೂಕ್ಷ್ಮ ಸ್ವಭಾವದವರು. ಸಂಬಂಧಿಗಳೊಂದಿಗೆ ಜೀವಿಸಲು ಅವರು ಆದ್ಯತೆ ನೀಡುತ್ತಾರೆ. ಈ ವರ್ಷದಲ್ಲಿ ಭಾವನಾತ್ಮಕ ಮನೋಭಾವಕ್ಕಿಂತಲೂ ಪ್ರಾಯೋಗಿಕ ವಿಧಾನವನ್ನು ಮೈಗೂಡಿಸಿಕೊಳ್ಳುವ ಮೂಲಕ ನೀವು ಹೆಚ್ಚಿನ ಲಾಭ ಗಳಿಸಲಿದ್ದೀರಿ. ವರ್ಷದ ಆರಂಭದಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸಲು ಯತ್ನಿಸಲಿದ್ದೀರಿ. ಕೌಟುಂಬಿಕ ಚಟುವಟಿಕೆಗಳಿಗೆ ಸಂಪೂರ್ಣ ಗಮನವನ್ನು ನೀಡುವುದರ ಜೊತೆಗೆ ಕುಟುಂಬದ ಸದಸ್ಯರ ನೆರವಿನೊಂದಿಗೆ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ. ಈ ವರ್ಷದಲ್ಲಿ ನಿಮ್ಮ ಕುಟುಂಬದ ಮಾಲೀಕತ್ವದ ಸಂಸ್ಥೆ ಅಥವಾ ದೀರ್ಘ ಕಾಲದಿಂದ ನಿಮ್ಮ ಕುಟುಂಬವು ನಡೆಸುತ್ತಿರುವ ವ್ಯವಹಾರವನ್ನು ನೀವು ನಡೆಸುತ್ತಿದ್ದರೆ ಆ ಉದ್ಯಮದಲ್ಲಿ ಸಾಕಷ್ಟು ಹಣವನ್ನು ಗಳಿಸಲಿದ್ದೀರಿ. ನಿಮ್ಮ ಹಣಕಾಸಿನ ಸ್ಥಿತಿಯು ಚೆನ್ನಾಗಿರಲಿದೆ. ಅಂತರಾಷ್ಟ್ರೀಯ ಪ್ರಯಾಣ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಭೂಸೇನೆ, ವಾಯುಪಡೆಯ ಅಥವಾ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ನೀವು ಅರ್ಜಿ ಸಲ್ಲಿಸುವುದಾದರೆ ನಿಮಗೆ ಯಶಸ್ಸು ದೊರೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತಸ ನೆಲೆಸಲಿದೆ. ಕುಟುಂಬದ ಸದಸ್ಯರು ನೆರವು ಒದಗಿಸಲಿದ್ದಾರೆ. ತಾಯಂದರು ಸಾಕಷ್ಟು ಪ್ರೀತಿಯನ್ನು ಗಳಿಸಲಿದ್ದಾರೆ. ನಿಮ್ಮ ತಾಯಿಯು ಮೌಲ್ಯಯುತ ಪಾಠವನ್ನು ಕಲಿಸಲಿದ್ದಾರೆ. ಅವರು ನಿಮಗೆ ಮಾರ್ಗದರ್ಶನ ನೀಡುವುದರಿಂದ ಹೊಸ ಅವಕಾಶಗಳ ಲಾಭವನ್ನು ಪಡೆಯಲು ನಿಮಗೆ ಸಾಧ್ಯವಾಗಲಿದೆ. ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆದರೆ ಅವರೊಂದಿಗಿನ ನಿಮ್ಮ ಸಂಬಂಧವು ಗಟ್ಟಿಯಾಗಿ ಉಳಿಯಲಿದೆ. ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೂ ಅವರೊಂದಿಗೆ ಗೌರವಯುತವಾಗಿ ವರ್ತಿಸಿ. ನೀವು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿದ್ದರೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳ ವಿಚಾರದಲ್ಲಿ ನೀವು ಸಾಕಷ್ಟು ಕಾಳಜಿ ವಹಿಸಬೇಕು. ನಿಮ್ಮ ಅತ್ತೆ ಮಾವಂದಿರು ಯಾವುದಾದರೂ ಪ್ರಮುಖ ವಿಚಾರದಲ್ಲಿ ನಿಮಗೆ ಮೌಲ್ಯಯುತ ವಿಚಾರಗಳನ್ನು ಕಲಿಸಲಿದ್ದಾರೆ. ಈ ವರ್ಷದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯಕ್ಕೆ ಗಮನ ನೀಡುವುದು ಒಳ್ಳೆಯದು. ಏಕೆಂದರೆ ಅವರ ಆರೋಗ್ಯದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ಕುರಿತು ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ಮಕ್ಕಳಿಗೂ ಸಂತಸದ ಸುದ್ದಿ ಲಭಿಸಲಿದೆ.

ಸಿಂಹ:
ನಿಮಗೆ ಈ ವರ್ಷದಲ್ಲಿ ಅತ್ಯುತ್ತಮ ಫಲ ದೊರೆಯಲಿದೆ. ವೇಗವನ್ನು ಪಡೆಯಲು ವಿಫಲವಾಗಿರುವ ನಿಮ್ಮ ಉಪಕ್ರಮಗಳಿಗೆ ವೇಗ ದೊರೆಯಲಿದ್ದು, ನಿಮ್ಮ ವ್ಯವಹಾರವನ್ನು ಮುನ್ನಡೆಸುವಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಸಂಸ್ಥೆಯನ್ನು ಬೆಳೆಸುವ ಉದ್ದೇಶವನ್ನು ನೀವು ಹೊಂದಿದ್ದರೆ ಈ ವರ್ಷದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ವರ್ಷದಲ್ಲಿ ನೀವು ಅನಿರೀಕ್ಷಿತವಾಗಿ ಸಂಪತ್ತನ್ನು ಗಳಿಸುವ ಸಾಧ್ಯತೆ ಇದೆ. ಅಲ್ಲದೆ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ವರ್ಷದ ಆರಂಭದಲ್ಲಿ ನೀವು ಆರೋಗ್ಯಕ್ಕೆ ತುಸು ಹೆಚ್ಚಿನ ಗಮನವನ್ನು ನೀಡಬೇಕು. ಈ ವರ್ಷದಲ್ಲಿ ನಿಮ್ಮ ಕುಟುಂಬಕ್ಕೆ ನೀವು ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ತಪ್ಪು ಸಂವಹನವು ಸಮಸ್ಯೆಗಳನ್ನುಂಟು ಮಾಡಬಹುದು. ಕೆಲಸಕ್ಕಾಗಿ ಅನೇಕ ಬಾರಿ ನೀವು ವಿದೇಶಕ್ಕೆ ಪ್ರಯಾಣಿಸಬೇಕಾದೀತು. ಈ ವರ್ಷದಲ್ಲಿ ಉನ್ನತ ಶಿಕ್ಷಣದಿಂದ ನಿಮಗೆ ಲಾಭ ದೊರೆಯಲಿದೆ. ಈ ವರ್ಷದಲ್ಲಿ ನೀವು ಮುನ್ನಡೆ ಸಾಧಿಸಲಿದ್ದೀರಿ. ಕಾಲಕ್ರಮೇಣ ನೀವು ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಲಿದ್ದೀರಿ. ಈ ವರ್ಷದ ಮಧ್ಯದಲ್ಲಿ ನೀವು ಉತ್ತಮ ಸ್ಥಾನವನ್ನು ತಲುಪಲಿದ್ದೀರಿ. ಕಾಲ ಕಳೆದಂತೆ, ನೀವು ಸಾಕಷ್ಟು ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದೀರಿ ಎನ್ನುವ ಭಾವನೆ ನಿಮ್ಮಲ್ಲಿ ಉಂಟಾಗಬಹುದು. ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಅಲ್ಲದೆ ನಿಮ್ಮ ಮನಸ್ಸಿನಲ್ಲಿ ತೃಪ್ತಿ ನೆಲೆಸಲಿದೆ. ಯಾವುದೇ ಸಂಸ್ಥೆಯ ಫ್ರಾಂಚೈಸಿಯನ್ನು ನೀವು ಪಡೆದಿದ್ದರೆ ಅಥವಾ ಎನ್‌.ಜಿ.ಒ ಅನ್ನು ಮುನ್ನಡೆಸುತ್ತಿದ್ದರೆ ನಿಮ್ಮ ಅನನ್ಯತೆಯನ್ನು ತೋರಿಸಿಕೊಡಲಿದ್ದೀರಿ. ನಿಮ್ಮ ವರ್ಚಸ್ಸು ಹಾಗೂ ಉತ್ಪಾದಕತೆಯಲ್ಲಿ ವೃದ್ಧಿ ಉಂಟಾಗಲಿದೆ. ಇದರಿಂದ ಸಾಕಷ್ಟು ಗಳಿಕೆಯನ್ನು ಮಾಡಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ಮೇಲೆ ನೀವು ಹೊಂದಿರುವ ನಂಬಿಕೆಯು ದೊಡ್ಡ ಮಟ್ಟದ ಡೀಲನ್ನು ಕುದುರಿಸಲು ನಿಮಗೆ ಸಹಾಯ ಮಾಡಲಿದೆ. ಗರ್ಭಿಣಿಯರು ಈ ವರ್ಷದ ಆರಂಭದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಹೊಟ್ಟೆಯಲ್ಲಿ ಉಷ್ಣ ಕಾಣಿಸಿಕೊಳ್ಳಲಿದ್ದು ಅಧಿಕ ರಕ್ತದೊತ್ತಡವನ್ನುಂಟು ಮಾಡಬಹುದು. ಅಲ್ಲದೆ ಅದೃಷ್ಟವು ನಿಮ್ಮ ಪರವಾಗಿದ್ದು, ವರ್ಷದ ಆರಂಭದಲ್ಲಿ ನೀವು ನಿಗದಿಪಡಿಸುವ ಯಾವುದೇ ಗುರಿಯಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಇದರಿಂದಾಗಿ ಸಮುದಾಯದಲ್ಲಿ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ನಿಮ್ಮ ಸಾಮಾಜಿಕ ವರ್ತುಲ ಮತ್ತು ಸಾರ್ವಜನಿಕ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಏಪ್ರಿಲ್‌ ತಿಂಗಳ ನಂತರ ಯಾವುದಾದರೂ ಹೊಸ ವ್ಯವಹಾರಕ್ಕೆ ಕೈ ಹಾಕುವುದು ಒಳ್ಳೆಯದು. ಮಾರ್ಚ್‌ ಮತ್ತು ಅಕ್ಟೋಬರ್‌ ನಡುವೆ ವಿದೇಶಕ್ಕೆ ಪ್ರಯಾಣಿಸಲು ನೀವು ಇಚ್ಛಿಸುವುದಾದರೆ ಒಳ್ಳೆಯದು.

ಕನ್ಯಾ:
ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಈ ವರ್ಷದ ಆರಂಭಿಕ ದಿನಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ನಿಮ್ಮನ್ನು ಕಾಡುವ ಮಾನಸಿಕ ಒತ್ತಡದಿಂದ ಹೊರಬರುವುದಕ್ಕಾಗಿ ನೀವು ಸಾಕಷ್ಟು ಹೆಣಗಾಡುವ ಅನಿವಾರ್ಯತೆ ಎದುರಾಗಬಹುದು. ಈ ಸಮಸ್ಯೆಗಳನ್ನು ಬಗೆಹರಿಸಲು ನಿಮಗೆ ಮಾರ್ಗದರ್ಶಕರ ಸಹಾಯ ಬೇಕಾಗಬಹುದು. ತದನಂತರ ನೀವು ಇಡೀ ವರ್ಷದಲ್ಲಿ ಹಂತಹಂತವಾಗಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಸಂಗಾತಿಗಳು ನಿಮ್ಮ ನೆರವಿಗೆ ಧಾವಿಸಲಿದ್ದಾರೆ. ನಿಮ್ಮ ಕುಟುಂಬದ ಸದಸ್ಯರು ಸಹ ನಿಮ್ಮ ನೆರವಿಗೆ ಧಾವಿಸಲಿದ್ದಾರೆ. ಏಕಾಂಗಿಯಾಗುವುದನ್ನು ಮತ್ತು ಕೋಪಗೊಳ್ಳುವುದನ್ನು ತಡೆಯಲು ವೈಯಕ್ತಿಕ ಸಾಧನೆಯ ಹಾದಿಯಲ್ಲಿ ಇತರರನ್ನು ಪಕ್ಕಕ್ಕೆ ಸರಿಸುವುದನ್ನು ಮಾಡಬೇಡಿ. ಈ ವರ್ಷದಲ್ಲಿ ಸ್ಪರ್ಧಿಸಲು ಸಾಕಷ್ಟು ಅವಕಾಶಗಳು ಲಭಿಸಬಹುದು. ರಾಜಕೀಯದಲ್ಲಿ ಸಾಕಷ್ಟು ಯಶಸ್ಸು ಮತ್ತು ಪ್ರಮುಖ ಸ್ಥಾನ ದೊರೆಯಲಿದೆ. ನಿಮ್ಮೆಲ್ಲ ಪ್ರಯತ್ನವನ್ನು ಮಾಡಿರಿ. ಯಶಸ್ಸು ನಿಮ್ಮ ಕದವನ್ನು ತಟ್ಟಲಿದೆ. ಈ ವರ್ಷದಲ್ಲಿ ವಿದೇಶಕ್ಕೆ ಪ್ರಯಾಣಿಸಲು ನಿಮಗೆ ಅವಕಾಶ ಲಭಿಸಬಹುದು. ಹೀಗಾಗಿ ನಿಮ್ಮ ಉದ್ಯೋಗಕ್ಕೆ ಒಂದಷ್ಟು ಹೊಸ ದೃಷ್ಟಿಕೋನವನ್ನು ನೀಡಲು ಯತ್ನಿಸಿರಿ. ಯಾವುದೇ ವ್ಯಕ್ತಿಗೆ ಹಾನಿಯನ್ನುಂಟು ಮಾಡಬೇಡಿ. ಅಲ್ಲದೆ ಅಗತ್ಯವಿರುವವರಿಗೆ ಸಹಾಯ ಮಾಡುವುದನ್ನು ಮುಂದುವರಿಸಬೇಡಿ. ನೀವು ಇಚ್ಛಿಸಿದರೆ ಈ ವರ್ಷದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಲಿದ್ದೀರಿ. ಆದರೆ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಅಲ್ಲದೆ ಈ ವರ್ಷದಲ್ಲಿ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ನಡುವಿನ ಸಂಬಂಧವು ಪರೀಕ್ಷೆಗೆ ಒಳಪಡಬಹುದು. ಹೀಗಾಗಿ ಯಾವುದೇ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳಿ. ನಿಮ್ಮ ಬಗ್ಗೆ ಪ್ರತ್ಯೇಕವಾಗಿ ಯೋಚಿಸಬೇಡಿ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ. ಕಾನೂನಿನ ವಿಚಾರಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ವರ್ಷದ ಮಧ್ಯದಲ್ಲಿ ನಿಮಗೆ ಸಾಮಾಜಿಕ ಮನ್ನಣೆ ದೊರೆಯಲಿದೆ. ಈ ವರ್ಷದಲ್ಲಿ ನೀವು ಅನೇಕ ಬಹುಮಾನಗಳನ್ನು ಗಳಿಸಲಿದ್ದೀರಿ. ಇದರಿಂದ ನಿಮಗೆ ಸಂತಸ ಲಭಿಸಲಿದೆ. ಗೌಪ್ಯವಾಗಿ ಖರ್ಚು ಮಾಡುವುದು ಕೂಡ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು, ಆದ್ದರಿಂದ ಹಣದ ಮೌಲ್ಯವನ್ನು ಗುರುತಿಸಲು ಕಲಿಯಿರಿ ಮತ್ತು ಅನಗತ್ಯ ಖರ್ಚುಗಳಿಂದ ದೂರವಿರಿ. ಈ ವರ್ಷ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಆಸ್ತಿಯನ್ನು ಗಳಿಸಲಿ ನಿಮಗೆ ಉತ್ತಮ ಅವಕಾಶವಿದೆ. ಈ ವರ್ಷದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳ ಕುರಿತು ಇಬ್ಬರು ವೈದ್ಯರ ಅಭಿಪ್ರಾಯವನ್ನು ಪಡೆಯಲು ಯತ್ನಿಸಿ. ಆಗ ಮಾತ್ರವೇ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ.

ತುಲಾ:
ತುಲಾ ರಾಶಿಯಲ್ಲಿ ಜನಿಸದ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಪ್ರೇರಣೆಯನ್ನು ಪಡೆಯುತ್ತಾರೆ ಮತ್ತು ಸಾಮರಸ್ಯಕ್ಕೆ ಒತ್ತು ನೀಡುತ್ತಾರೆ. ಈ ವರ್ಷದ ಆರಂಭದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ಇಚ್ಛಿಸುವಿರಿ. ಹೀಗಾಗಿ ನಿಮ್ಮ ಇಚ್ಛೆಗಳು ನೆರವೇರಲಿದ್ದು ಆತ್ಮವಿಶ್ವಾಸವು ಮರಳಲಿದೆ. ತದನಂತರ ಬದುಕನ್ನು ಬೇರೆಯೇ ಆಯಾಮದಿಂದ ನೋಡಲಿದ್ದೀರಿ. ಇದರ ಪರಿಣಾಮವಾಗಿ ನಿಮ್ಮ ಬದುಕಿಗೆ ತಾಜಾತನ ಲಭಿಸಲಿದ್ದು, ಯಶಸ್ಸು ನಿಮ್ಮನ್ನು ಕೈಬೀಸಿ ಕರೆಯಲಿದೆ. ಈ ವರ್ಷದ ಪ್ರಾರಂಭದಲ್ಲಿ ನಿಮ್ಮ ಕ್ರಿಯೆಗಳು ಮತ್ತು ಮಾತುಗಳ ಮೂಲಕ ಜನರನ್ನು ಸೆಳೆಯಲು ಯಶಸ್ವಿಯಾಗಲಿದ್ದೀರಿ. ಹೀಗಾಗಿ ನಿಮ್ಮೆಲ್ಲ ಕೆಲಸವು ಪೂರ್ಣಗೊಳ್ಳಲಿದೆ. ಕಂಪನಿ, ಉದ್ಯೋಗ ಅಥವಾ ಸ್ವಉದ್ಯೋಗವಾಗಿರಲಿ, ಎಲ್ಲದರಲ್ಲೂ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಕುಟುಂಬದಲ್ಲಿಯೂ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ಒಡಹುಟ್ಟಿದವರ ನಡುವೆ ವಿವಾದಗಳು ಉಂಟಾಗಬಹುದು. ಆದರೆ ನಿಮ್ಮ ಅನುಭೂತಿಯನ್ನು ವ್ಯಕ್ತಪಡಿಸುವ ಮೂಲಕ ಅವರನ್ನು ಬೆಂಬಲಿಸಲಿದ್ದೀರಿ. ಕುಟುಂಬದ ಹಿರಿಯ ಸದಸ್ಯರು ನಿಮಗೆ ಪ್ರೀತಿಯನ್ನು ತೋರಲಿದ್ದಾರೆ. ಅವರ ಆಶೀರ್ವಾದದಿಂದ ನಿಮ್ಮ ಕೆಲಸವನ್ನು ನೀವು ಪೂರ್ಣಗೊಳಿಸಲಿದ್ದೀರಿ. ವಿದೇಶಕ್ಕೆ ಪ್ರಯಾಣಿಸಲು ಸಿದ್ಧರಾಗಿರುವ ವ್ಯಕ್ತಿಗಳು ಆರಂಭದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಅವರ ವೀಸಾದಲ್ಲಿ ವಿಳಂಬ ಉಂಟಾಗಬಹುದು. ಆದರೆ ಇದರಿಂದ ನೀವು ವಿಚಲಿತರಾಗುವುದಿಲ್ಲ. ಆದೆ ಒಂದಷ್ಟು ಸಮಯದ ನಂತರ ನೀವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಿಮಗೆ ವೀಸಾ ದೊರೆಯಲಿದೆ. ಈ ವರ್ಷದಲ್ಲಿ ನಿಮಗೆ ಹೆಚ್ಚಿನ ಖರ್ಚುವೆಚ್ಚ ಉಂಟಾಗಬಹುದು. ಖರ್ಚುವೆಚ್ಚಗಳು ಹೇಗೆ ಕೈಮೀರಿ ಹೋಗಿವೆ ಎಂಬುದು ನಿಮ್ಮ ಅರಿವಿಗೆ ಬರದೇ ಇರಬಹುದು. ಪ್ರಣಯಭರಿತ ಸಂಬಂಧವನ್ನು ನಿಭಾಯಿಸುವುದು ನಿಮಗೆ ಕಷ್ಟಕರವಾದೀತು. ಆದರೆ ನೀವು ಬದುಕಿನಲ್ಲಿ ಸವಾಲನ್ನು ಆನಂದಿಸಿದರೆ ಹಾಗೂ ಆರೋಗ್ಯದಾಯಕ ಸಂತುಲನವನ್ನು ಕಾಪಾಡಿದರೆ ಪ್ರೇಮವು ನಿಮ್ಮ ಬಯಕೆಯನ್ನು ಈಡೇರಿಸಲಿದೆ. ಕೌಟುಂಬಿಕ ಜೀವನದಲ್ಲಿ ಇನ್ನಷ್ಟು ಶುಭ ಸುದ್ದಿ ದೊರೆಯಲಿದೆ. ನಿಮ್ಮ ಮಕ್ಕಳು ನಿಮಗೆ ಸಂತಸವನ್ನು ತರಲಿದ್ದಾರೆ. ಈ ವರ್ಷದಲ್ಲಿ ನಿಮ್ಮ ಸೋದರಮಾವನ ಜೊತೆಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ರಿಯಲ್‌ ಎಸ್ಟೇಟ್‌ ಖರೀದಿ ಮತ್ತು ಮಾರಾಟದಲ್ಲಿ ಲಾಭ ದೊರೆಯಲಿದೆ. ವರ್ಷದ ಮಧ್ಯದಲ್ಲಿ ನಿಮಗೆ ಸಾಕಷ್ಟು ಲಾಭ ಉಂಟಾಗಲಿದೆ. ಅಲ್ಲದೆ ವರ್ಷದ ಆರಂಭಿಕ ದಿನಗಳಲ್ಲಿ ಸಾಕಷ್ಟು ಆರ್ಥಿಕ ಲಾಭ ಗಳಿಸಲು ಅವಕಾಶಗಳು ದೊರೆಯಬಹುದು.

ವೃಶ್ಚಿಕ :
ವೃಶ್ಚಿಕ ರಾಶಿಯವರು ಗೌಪ್ಯತೆಯನ್ನು ಕಾಪಾಡುವಲ್ಲಿ ನಿಸ್ಸೀಮರು. ಈ ಮನೋಭಾವದಿಂದಾಗಿ ಈ ಬಾರಿ ನೀವು ಲಾಭ ಗಳಿಸಲಿದ್ದೀರಿ. ನಿಮ್ಮ ಗುರಿಗಳ ಕುರಿತು ಗೌಪ್ಯತೆಯನ್ನು ಕಾಪಾಡಿಕೊಂಡರೆ ಈ ವರ್ಷದಲ್ಲಿ ನೀವು ಸಾಕಷ್ಟು ಸಾಧನೆಯನ್ನು ಮಾಡಲಿದ್ದೀರಿ. ಈ ವರ್ಷವನ್ನು ನೀವು ಅದ್ಭುತವಾಗಿ ಪ್ರಾರಂಭಿಸಲಿದ್ದೀರಿ. ನಿಮ್ಮ ಆಯಸ್ಕಾಂತೀಯ ಗುಣದ ಕಾರಣ ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ ಹಾಗೂ ನಿಮ್ಮ ಅಭಿಮಾನಿ ಎನಿಸಲಿದ್ದಾರೆ. ಹೆಣ್ಣಾಗಲಿ, ಗಂಡಾಗಲಿ ಎಲ್ಲರೂ ನಿಮ್ಮನ್ನು ಇಷ್ಟಪಡಲಿದ್ದಾರೆ. ಈ ಮೂಲಕ ನಿಮ್ಮ ಕೆಲಸವನ್ನು ಮುಗಿಸಲಿದ್ದೀರಿ. ಕೌಟುಂಬಿಕ ಬದುಕಿನಲ್ಲಿ ಪ್ರಣಯ ಮತ್ತು ಪ್ರೇಮವು ನೆಲೆಸಲಿದೆ. ಈ ವರ್ಷದಲ್ಲಿ ನಿಮ್ಮ ಪ್ರಣಯ ಸಂಬಂಧದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಬಹುದು. ನಿಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ನಿಮ್ಮ ಸಂಗಾತಿಗೆ ಹೇಳಲು ಹಿಂಜರಿಯುವಿರಿ. ನೀವು ಆಗಾಗ್ಗೆ ಸಾಕಷ್ಟು ಮಾತನಾಡಬಹುದು. ಇದು ಇತರರಲ್ಲಿ ಕಿರಿಕಿರಿ ಉಂಟು ಮಾಡಬಹುದು. ಕುಟುಂಬದಲ್ಲಿ ಸಂಘರ್ಷ ಕಾಣಿಸಿಕೊಳ್ಳಬಹುದು. ನಿಮ್ಮ ಕುಟುಂಬದ ಹಿರಿಯರ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ರಿಯಲ್‌ ಎಸ್ಟೇಟ್‌ ಖರೀದಿಯಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಸಮುದಾಯದಲ್ಲಿ ನಿಮ್ಮ ವರ್ಚಸ್ಸು ವೃದ್ದಿಸಲಿದೆ. ಸಾಕಷ್ಟು ಕಠಿಣ ಶ್ರಮದ ಮೂಲಕವೇ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ವರ್ಚಸ್ಸನ್ನು ವೃದ್ಧಿಸಲು ಗಮನ ನೀಡಲಿದ್ದೀರಿ. ಈ ವರ್ಷದ ಮೇ ತಿಂಗಳಿನಲ್ಲಿ ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ತದನಂತರ ನೀವು ವೈವಾಹಿಕ ಬಂಧನಕ್ಕೆ ಕಾಲಿಡಬಹುದು. ನೀವು ಇನ್ನೂ ಅವಿವಾಹಿತರಾಗಿದ್ದರೆ ಈ ವರ್ಷದಲ್ಲಿ ನಿಮಗೆ ವಿವಾಹದ ಯೋಗ ಕೂಡಿ ಬರಲಿದೆ. ಪ್ರೇಮ ವಿವಾಹಕ್ಕೆ ಕಾಲಿಡುವವರು ಸಹ ಯಶಸ್ಸನ್ನು ಗಳಿಸಲಿದ್ದಾರೆ. ಅರೋಗ್ಯದ ದೃಷ್ಟಿಯಿಂದ ಈ ವರ್ಷವು ಸ್ವಲ್ಪ ದುರ್ಬಲ ಎನಿಸಲಿದೆ. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸಿ ಮತ್ತು ಆಗಾಗ್ಗೆ ಅರೋಗ್ಯ ತಪಾಸಣೆ ನಡೆಸಿ. ಈ ವರ್ಷದ ಆರಂಭದಲ್ಲಿ ಅನಿರೀಕ್ಷಿತವಾಗಿ ಹಣವನ್ನು ಪಡೆಯುವ ಸಾಧ್ಯತೆ ಇದೆ. ಈ ವರ್ಷದಲ್ಲಿ ನೀವು ಹೊಸ ಕಂಪನಿಯನ್ನು ತೆರೆಯಬಹುದು. ಈ ವರ್ಷದ ಆರಂಭದಲ್ಲಿ ಯಾರೊಂದಿಗೂ ಅಸಭ್ಯತೆಯಿಂದ ವರ್ತಿಸಬೇಡಿ. ಇಲ್ಲದಿದ್ದರೆ ನಿಮ್ಮ ಕೆಲಸಕ್ಕೆ ಧಕ್ಕೆಯುಂಟಾಗಬಹುದು. ಈ ವರ್ಷದಲ್ಲಿ ನಿಮ್ಮ ಹೆಚ್ಚಿನ ಬಯಕೆಗಳು ಈಡೇರಲಿದೆ. ಈ ಕಾರಣಕ್ಕಾಗಿ ನೀವು ಸಂಭ್ರಮಿಸಬಹುದು. ಆದರೆ ನಿಮ್ಮ ಮೇಲೆ ನಿಮಗೆ ನಿಯಂತ್ರಣವಿರಲಿ. ನಿಮ್ಮ ಪ್ರೀತಿ ಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರ ಕುರಿತು ನಿರ್ಲಕ್ಷ್ಯ ಭಾವನೆ ತೋರಬೇಡಿ. ಹೀಗೆ ಮಾಡಿದಲ್ಲಿ ಇಡೀ ವರ್ಷ ನೀವು ಯಶಸ್ಸನ್ನು ಸಾಧಿಸಲಿದ್ದೀರಿ.

ಧನು:
ಧನು ರಾಶಿಯವರು ಸಹಜವಾಗಿಯೇ ತಮ್ಮ ಜವಾಬ್ದಾರಿ ಮತ್ತು ಬದುಕಿನ ಗುರಿಯ ಕುರಿತು ಬದ್ಧತೆ ತೋರುತ್ತಾರೆ. ಅವರು ಬೇಗನೆ ಸಹನೆ ಕಳೆದುಕೊಂಡರೂ ತಮ್ಮ ಗುರಿಯನ್ನು ಈಡೇರಿಸುವ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಅವರು ವೈಯಕ್ತಿಕ ವಿಚಾರಗಳನ್ನು ಗೌರವಿಸುತ್ತಾರೆ ಹಾಗೂ ತಮ್ಮ ಕುರಿತು ಯೋಚಿಸುವ ಹಕ್ಕನ್ನು ಇತರರು ಸಹ ಗೌರವಿಸಬೇಕೆಂದು ಭಾವಿಸುತ್ತಾರೆ. ಹೊಸ ಉತ್ತುಂಗಕ್ಕೆ ಏರುವ ನಿಮ್ಮ ಗುರಿಯು ಯಶಸ್ವಿಯಾಗಲಿದೆ. ಈ ವರ್ಷದ ಆರಂಭದಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಬದುಕಿನ ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ದೊರೆಯಲಿದೆ. ಅಲ್ಲದೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವರ್ಷದ ಆರಂಭದಲ್ಲೇ ದೊಡ್ಡ ಪ್ರಮಾಣದ ಆರ್ಥಿಕ ಲಾಭ ಉಂಟಾಗಬಹುದು. ಯಾವುದೇ ಹಿಂಜರಿಕೆ ಇಲ್ಲದೆ ನಿಮ್ಮ ಅಗತ್ಯತೆಗಳು ಮತ್ತು ಸಂತಸಕ್ಕಾಗಿ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡುವುದನ್ನು ನೀವು ಮುಂದುವರಿಸಲಿದ್ದೀರಿ. ಈ ವರ್ಷದ ಆರಂಭಿಕ ದಿನಗಳು ಆರೋಗ್ಯದ ದೃಷ್ಟಿಯಿಂದ ಅನುಕೂಲಕರ. ಆದರೆ ನಿರಂತರ ವ್ಯಾಯಾಮ ಮತ್ತು ಧ್ಯಾನದ ಮೂಲಕ ನಿಮ್ಮ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮಕ್ಕೆ ಗಮನ ನೀಡಬೇಕು. ಈ ವರ್ಷದಲ್ಲಿ ಕೌಟುಂಬಿಕ ಬದುಕಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗಬಹುದು. ಕುಟುಂಬದ ಸದಸ್ಯರು ಸಮನ್ವಯ ತೋರದ ಕಾರಣ ಆಗಾಗ್ಗೆ ವಿವಾದಗಳು ಉಂಟಾಗಬಹುದು. ಮನೆಯಲ್ಲಿ ಸಂತಸ ಮರೆಯಾಗಬಹುದು. ನೀವು ಕೆಲಸದಲ್ಲಿ ನಿರತರಾಗುವ ಕಾರಣ ನಿಮ್ಮ ಮನೆಗೆ ಸಮಯವನ್ನು ನೀಡಲು ನಿಮಗೆ ಕಷ್ಟಕರವಾದೀತು. ವಿದೇಶಕ್ಕೆ ಪ್ರಯಾಣಿಸಲು ಇಚ್ಛಿಸುವವರಿಗೆ ಈ ವರ್ಷದ ಅರಂಭದಲ್ಲಿ ಅದೃಷ್ಟ ಖುಲಾಯಿಸಬಹುದು. ಇಲ್ಲದಿದ್ದರೆ ನೀವು ಆಗಸ್ಟ್‌ ತನಕ ಕಾಯಬೇಕಾದೀತು. ನೀವು ಕಾರನ್ನು ಖರೀದಿಸಲು ಬಯಸುವುದಾದರೆ ಈ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ಏಕೆಂದರೆ ಈ ದಿಸೆಯಲ್ಲಿ ಹೆಚ್ಚಿನ ಅವಕಾಶಗಳು ದೊರೆಯದಿರಬಹುದು. ನೀವು ಸರಿಯಾದ ಸಮಯಕ್ಕಾಗಿ ಕಾದರೆ ಮಾತ್ರವೇ ಕಾರಿನ ಖರೀದಿಯಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಶನಿ ದೇವರ ಅನುಗ್ರಹದಿಂದಾಗಿ ಸಾಕಷ್ಟು ಕೆಲಸವನ್ನು ನೀವು ಪೂರ್ಣಗೊಳಿಸಲಿದ್ದೀರಿ. ಇದರಿಂದ ಬದುಕಿನಲ್ಲಿ ಮುಂದೆ ಸಾಗಲು ಮತ್ತು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ. ಕಂಪನಿಯಾಗಿರಲಿ ಅಥವಾ ಸ್ವಉದ್ಯೋಗವಾಗಿರಲಿ, ಎಲ್ಲಾ ಕ್ಷೇತ್ರದಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಈ ವರ್ಷದಲ್ಲಿ ನಿಮ್ಮ ಒಡಹುಟ್ಟಿದವರಲ್ಲಿ ಯಾರಿಗಾದರೂ ನೆರವು ಒದಗಿಸುವ ಅವಕಾಶ ನಿಮಗೆ ಲಭಿಸಬಹುದು. ಇದು ನಿಮ್ಮ ಬದುಕಿನ ಪ್ರಮುಖ ತಿರುವು ಎನಿಸಲಿದೆ. ನೀವು ಅವರಿಗೆ ನೆರವನ್ನು ಒದಗಿಸಿದಲ್ಲಿ ಅವರೊಂದಿಗಿನ ನಿಮ್ಮ ಸಂಬಂಧವನ್ನು ಸುಧಾರಿಸುವ ಜೊತೆಗೆ ಅವರು ನಿಮ್ಮನ್ನು ಜೀವನ ಪರ್ಯಂತ ನೆನಪಿಸಲಿದ್ದಾರೆ.

ಮಕರ:
ಮಕರ ರಾಶಿಯಲ್ಲಿ ಜನಿಸಿದವರು ಈ ವರ್ಷದಲ್ಲಿ ಅದೃಷ್ಟದ ನೆರವನ್ನು ಪಡೆಯಲಿದ್ದಾರೆ. ಈ ವರ್ಷದಲ್ಲಿ ನಿಮ್ಮ ಗಳಿಕೆಯು ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಿಂದಿನ ಪ್ರಯತ್ನಗಳ ಕಾರಣ ನೀವೀಗ ಹಣ ಪಡೆಯಲಿದ್ದೀರಿ. ಖರ್ಚುವೆಚ್ಚದ ನಡುವೆಯೂ ನಿಮ್ಮ ಅಧಿಕ ಸಂಬಳದ ಕಾರಣ ಎಲ್ಲಾ ಕೆಲಸಗಳು ಸಾಂಗವಾಗಿ ಮುಂದುವರಿಯಲಿವೆ. ನೀವು ಯಾವುದೇ ಸಮಸ್ಯೆಯನ್ನು ಎದುರಿಸಿದರೂ, ಎದುರಾದ ಎಲ್ಲಾ ಸಮಸ್ಯೆಗಳು ಕಾಲ ಕಳೆದಂತೆ ದೂರಗೊಳ್ಳಲಿವೆ. ನಿಮ್ಮ ಕುಟುಂಬದ ದೃಷ್ಟಿಯಿಂದ ಇದು ನಿಮ್ಮ ಪಾಲಿಗೆ ಅದ್ಭುತ ವರ್ಷ ಎನಿಸಲಿದೆ. ಗುರುವಿನ ಅನುಗ್ರಹದ ಕಾರಣ ಕುಟುಂಬದಲ್ಲಿ ಅನ್ಯೋನ್ಯತೆ ಇರಲಿದೆ. ನಿಮ್ಮ ಪೋಷಕರು ನಿಮ್ಮ ಪರವಾಗಿದ್ದು ಎಲ್ಲಾ ರೀತಿಯಲ್ಲಿ ನಿಮ್ಮನ್ನು ಬೆಂಬಲಿಸಲಿದ್ದಾರೆ. ಅವರ ನೆರವಿನ ಕಾರಣ ನಿಮ್ಮ ಕಂಪನಿಯು ಬೆಳೆಯಲಿದೆ. ಹೀಗಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಇದು ನಿಮ್ಮ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೆ ನೀವು ಆಸ್ತಿಯನ್ನು ಪಡೆಯಲಿದ್ದೀರಿ. ನೀವು ಕುಟುಂಬದ ನಾಯಕತ್ವವನ್ನು ಪಡೆದುಕೊಳ್ಳಲಿದ್ದೀರಿ. ಜನರು ನಿಮ್ಮ ಮಾತಿಗೆ ವಿಶೇಷ ಗೌರವ ನೀಡಲಿದ್ದಾರೆ. ಆರೋಗ್ಯಯುತ ಆಹಾರವನ್ನು ನೀಡುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಬಹುದು. ಹಣದ ಕೊರತೆಯಿಂದ ಯಾವುದೇ ಕೆಲಸವು ಬಾಕಿ ಉಳಿಯದು. ನಿಮ್ಮ ಸಾಮಾಜಿಕ ಜಾಲವನ್ನು ಬೆಳೆಸಿಕೊಳ್ಳಲು ನಿಮಗೆ ಅವಕಾಶ ಒದಗಿಸಬಹುದು. ಸಾಮಾಜಿಕ ವರ್ತುಲವು ಬೆಳೆಯಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿದ ಚಟುವಟಿಕೆಗಳು ಮತ್ತು ಫಾಲೋವರ್‌ ಗಳು ಹೆಚ್ಚುವ ಕಾರಣ ನಿಮ್ಮ ಆನ್ಲೈನ್‌ ಅಸ್ಮಿತೆಯನ್ನು ವೃದ್ಧಿಸಲು ನೀವು ಯತ್ನಿಸಬೇಕು. ನೀವು ಈ ವರ್ಷದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದೀರಿ. ವಿದೇಶಕ್ಕೆ ಪ್ರಯಾಣಿಸಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ನಿಮಗೆ ಲಭಿಸಬಹುದು. ನಿಮ್ಮ ಹವ್ಯಾಸಗಳನ್ನು ತೋರಿಸಲು ಇದು ಸಕಾಲ. ಈ ಪ್ರಯಾಣವು ಮುಂದುವರಿಯಲಿದೆ. ಹೊಸ ಚೈತನ್ಯವನ್ನು ಗಳಿಸುವುದಕ್ಕಾಗಿ ಔತಣ ಕೂಟವನ್ನು ಆಯೋಜಿಸಿರಿ. ಪವಿತ್ರ ತಾಣಗಳಿಗೆ ಭೇಟಿ ನೀಡುವುದು ಮತ್ತು ನಿಮ್ಮ ಕುಟುಂಬದ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಕುಟುಂಬದಲ್ಲಿ ಸಂತಸ ತಂದುಕೊಡಲಿದೆ. ನಿಮ್ಮ ಒರಟುತನವು ಆಗಾಗ್ಗೆ ಸಮಸ್ಯೆಗಳನ್ನುಂಟು ಮಾಡಬಹುದು. ನೀವು ಸತ್ಯವನ್ನೇ ಮಾತನಾಡಿದರೂ, ಇದು ಇತರರ ಮನ ನೋಯಿಸುವಂತೆ ಮಾತನಾಡಲಿದ್ದೀರಿ. ಹೀಗಾಗಿ ನೀವು ಕೆಲಸದ ಸ್ತಳದಲ್ಲಿ ಎಚ್ಚರ ವಹಿಸಬೇಕು. ಕಟು ಸತ್ಯವನ್ನು ಯಾರಿಗೂ ಹೇಳಬೇಡಿ. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ತೋರಲಿದ್ದೀರಿ. ಅಲ್ಲದೆ ಕೆಲವೊಂದು ಧಾರ್ಮಿ ಸ್ಥಳಗಳನ್ನು ನಿರ್ಮಿಸುವ ಅವಕಾಶ ನಿಮಗೆ ಲಭಿಸಬಹುದು.

ಕುಂಭ:
ಕುಂಭ ರಾಶಿಯವರು ಸಂಧಾನ ಚತುರರು. ನಿಮ್ಮ ಮಾತುಗಳ ಮೂಲಕ ಇತರರಲ್ಲಿ ಅಚ್ಚರಿ ಮೂಡಿಸುವ ಸಾಮರ್ಥ್ಯ ನಿಮಗಿದ್ದು, ಅವರು ನಿಮ್ಮನ್ನು ಸುಲಭವಾಗಿ ಒಪ್ಪಿಕೊಳ್ಳುವಂತೆ ಮಾಡಲಿದ್ದೀರಿ. ನೀವು ಕುಂಭ ರಾಶಿಯವರಾದರೆ, ನೀವು ನೀತಿ ನಿಯಮಗಳನ್ನು ಮುರಿಯುವುದನ್ನು ಇಷ್ಟಪಡುವುದಿಲ್ಲ ಹಾಗೂ ನಿಮ್ಮ ಗುರಿಯನ್ನು ಸಾಧಿಸಿದ ನಂತರವೇ ನೀವು ವಿರಾಮವನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ರಾಶಿಯ ಅಧಿಪತಿ ಆಗಿರುವ ಶನಿಯು ಇಡೀ ವರ್ಷದಲ್ಲಿ ನಿಮ್ಮ ರಾಶಿಯಲ್ಲೇ ನೆಲೆಸಲಿದ್ದು, ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಉಂಟಾಗಲಿದೆ. ಸಾಕಷ್ಟು ಅನುಭವಿಯಂತೆ ನೀವು ವರ್ತಿಸಲಿದ್ದೀರಿ. ನಿಮ್ಮ ವರ್ತನೆ ಮತ್ತು ಕೆಲಸವು ನಿಮ್ಮ ಪಕ್ವತೆಯನ್ನು ತೋರಿಸಿಕೊಡಲಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಹೊಸ ಜವಾಬ್ದಾರಿಯನ್ನು ನೀಡಲಾಗುತ್ತದೆ. ಸಮಯಕ್ಕೆ ಮೊದಲೇ ಈ ಕೆಲಸವನ್ನು ನೀವು ಪೂರ್ಣಗೊಳಿಸಲಿದ್ದೀರಿ. ಈ ವರ್ಷದಲ್ಲಿ ಸಾಕಷ್ಟು ಅವಕಾಶಗಳು ನಿಮಗೆ ಲಭಿಸಲಿವೆ. ಅಲ್ಲದೆ ಏನಾದರೂ ಸಾಧನೆಯನ್ನು ಮಾಡಿಸಲಿದ್ದು, ಇದಕ್ಕೆ ತಕ್ಕುದಾದ ಫಲಿತಾಂಶ ನಿಮಗೆ ದೊರೆಯಲಿದೆ. ಸರ್ಕಾರಿ ವಲಯದಿಂದ ನಿಮಗೆ ಈ ವರ್ಷದಲ್ಲಿ ಸಾಕಷ್ಟು ಲಾಭ ದೊರೆಯಲಿದೆ. ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳು ವಿದೇಶಕ್ಕೆ ಪ್ರಯಾಣಿಸಲು ಅನುಕೂಲಕರ. ಅಲ್ಲದೆ ಧಾರ್ಮಿಕ ವಿಚಾರಗಳಲ್ಲಿ ನೀವು ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಮಂದಿರ – ಮಸೀದಿ ಅಥವಾ ಬೇರೆ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಸೇವೆ ನೀಡಲಿದ್ದೀರಿ. ಧಾರ್ಮಿಕ ಸ್ಥಳಕ್ಕೆ ಸಂಬಂಧಿಸಿದ ಸಮುದಾಯದಲ್ಲಿ ನಿಮಗೆ ಪ್ರಮುಖ ಸ್ಥಾನ ದೊರೆಯಲಿದೆ. ಈ ಕ್ಷಣದಲ್ಲಿ ರಾಹುವು ಪ್ರಭಾವಶಾಲಿಯಾಗಿದ್ದು, ಇತರರಿಗೆ ವಿಚಿತ್ರ ಎನಿಸುವ ಏನಾದರೂ ಮಾತನ್ನು ನೀವು ಆಡಬಹುದು. ನಿಮ್ಮ ಮಾತುಗಳನ್ನು ಪಾಲಿಸುವ ಸಾಮರ್ಥ್ಯ ನಿಮಗಿದೆ. ಆದರೆ ನೀವು ಬೇರೆಯೇ ವ್ಯಕ್ತಿಯಂತೆ ವರ್ತಿಸಲಿದ್ದು ನಿಮ್ಮನ್ನು ಸ್ವೀಕರಿಸಲು ಇತರರಿಗೆ ಕಷ್ಟಕರವೆನಿಸಲಿದೆ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬದುಕಿನಲ್ಲಿ ನಿಮ್ಮ ಕೆಲಸವು ಕಾಣಿಸಿಕೊಳ್ಳಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಚಿಂತಿಸುವ ಅಗತ್ಯವಿಲ್ಲ. ನಿಮಗೆ ಯಾವುದೇ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಕೇತುವಿನ ಕಾರಣ ಏನಾದರೂ ಗೌಪ್ಯ ಅಥವಾ ಮರೆಮಾಚಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ವರ್ಷದ ಆರಂಭದಲ್ಲಿ ನಿಮ್ಮ ಕುಟುಂಬದಲ್ಲಿ ಸಾಕಷ್ಟು ಪ್ರೀತಿ ನೆಲೆಸಲಿದೆ. ನಿಮ್ಮ ಪೋಷಕರು ನಿಮ್ಮನ್ನು ಪ್ರೀತಿಸಲಿದ್ದಾರೆ. ಅಲ್ಲದೆ ಯೋಜಿತ ಪ್ರವಾಸಕ್ಕೆ ನೀವು ಹೋಗಬಹುದು. ನಿಮ್ಮ ಕುಟುಂಬವು ನಿಮ್ಮನ್ನು ಬೆಂಬಲಿಸಲಿದ್ದು, ಸಾಕಷ್ಟು ಪ್ರೀತಿಯನ್ನು ನೀವು ಪಡೆಯಲಿದ್ದೀರಿ. ಈ ವರ್ಷದಲ್ಲಿ ನಿಮ್ಮ ಹಿರಿಯ ಒಡಹುಟ್ಟಿದವರು ನಿಮಗೆ ಸಾಕಷ್ಟು ನೆರವನ್ನು ಒದಗಿಸಲಿದ್ದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಕ್ಕಾಗಿ ಸಹಾಯ ಮಾಡಲಿದ್ದಾರೆ.

ಮೀನ:
ಮೀನ ರಾಶಿಯಲ್ಲಿ ಹುಟ್ಟಿದವರು ಶ್ರಮಶೀಲ ಸ್ವಭಾವದವರಾಗಿದ್ದು ಶಿಕ್ಷಣಕ್ಕೆ ಗೌರವ ನೀಡುತ್ತಾರೆ. ಅಲ್ಲದ ಭಾವನಾತ್ಮಕ ಸ್ವಭಾವವನ್ನೂ ಹೊಂದಿದ್ದಾರೆ. ಜನರು ಆಗಾಗ್ಗೆ ನಿಮ್ಮ ಭಾವನಾತ್ಮಕ ಸ್ವಭಾವದ ಲಾಭ ಪಡೆದುಕೊಳ್ಳಲಿದ್ದು ನಿಮಗೆ ನೋವು ನೀಡಲಿದ್ದಾರೆ. ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದಕ್ಕಾಗಿ ಈ ವರ್ಷದಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ರಾಹುವು ಇಡೀ ವರ್ಷದಲ್ಲಿ ನಿಮ್ಮ ರಾಶಿಯಲ್ಲಿರಲಿದ್ದಾನೆ. ಇದು ನಿಮ್ಮ ಮಾತು ಮತ್ತು ಕೃತಿಯ ನಡುವೆ ವ್ಯತ್ಯಾಸವನ್ನುಂಟು ಮಾಡಬಹುದು. ನಿಮ್ಮ ಭರವಸೆಯನ್ನು ಈಡೇರಿಸಲು ನಿಮಗೆ ಕಷ್ಟಕರವಾದೀತು. ಈ ಕಾರಣದಿಂದಾಗಿ ನಿಮಗೆ ಭಾವನಾತ್ಮಕ ಹಿನ್ನಡೆ ಉಂಟಾಗಬಹುದು. ನಿಮ್ಮ ಜವಾಬ್ದಾರಿಯನ್ನು ನಿಭಾಯಿಸದ ವಿಚಾರವನ್ನು ಬೇರೆಯವರೊಂದಿಗೆ ಹೇಳುವ ಕಾರಣ ನಿಮ್ಮ ಗೌರವಕ್ಕೆ ಕುಂದುಂಟಾಗಬಹುದು ಹಾಗೂ ಭಾವನಾತ್ಮಕ ಯಾತನೆ ಉಂಟಾಗಬಹುದು. ನೀವು ವಿವಾಹಿತರಾಗಿದ್ದರೆ ಅಥವಾ ಸಂಬಂಧದಲ್ಲಿದ್ದರೆ ನಿಮ್ಮ ಸಂಗಾತಿಗೆ ನೋಯಿಸುವ ಯಾವುದೇ ವಿಚಾರವನ್ನು ನೀವು ಹೇಳಬಾರದು. ಕೇತುವು ನಿಮ್ಮ ಏಳನೇ ಮನೆಯಲ್ಲಿದ್ದು, ಇದು ಸಂಘರ್ಷವನ್ನು ಮಾಡಲಿದ್ದು ನಿಮ್ಮ ವೈವಾಹಿಕ ಜೀವನಕ್ಕೆ ಧಕ್ಕೆಯನ್ನುಂಟು ಮಾಡಬಹುದು. ಇದನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ವೃತ್ತಿಯ ವಿಚಾರದಲ್ಲಿ ಈ ವರ್ಷವು ಯಶಸ್ವಿ ಎನಿಸಲಿದೆ. ಸರ್ಕಾರಿ ವಲಯದಲ್ಲಿ ಪ್ರಮುಖ ಹುದ್ದೆಯೊಂದು ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ಅದರೆ ನಿಮ್ಮ ಸಂಭಾವನೆಯನ್ನು ಎಚ್ಚರಿಕೆಯಿಂದ ನಿಭಾಯಿಸಲಿದ್ದೀರಿ. ಗುರುವಿನ ಆಶೀರ್ವಾದದ ಕಾರಣ ಆದಾಯ ಮತ್ತು ಬ್ಯಾಂಕಿನ ಮೊತ್ತದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮಗೆ ಹೂಡಿಕೆ ಮಾಡುವ ಇಚ್ಛೆ ಇದ್ದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದಕ್ಕೆ ಕೈ ಹಾಕಬೇಡಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಚಿಕಿತ್ಸೆಗೆ ನೀವು ಗಮನ ಹರಿಸಬೇಕು. ಏಕೆಂದರೆ ನಿಮ್ಮ ಆರೋಗ್ಯವು ಈ ಕ್ಷಣದಲ್ಲಿ ಕ್ಷೀಣವಾಗಿದೆ. ಈ ವರ್ಷದ ಆರಂಭದಲ್ಲಿ ಕುಟುಂಬದ ಸದಸ್ಯರು ತೃಪ್ತಿದಾಯಕವಾಗಿ ಪ್ರತಿಕ್ರಿಯೆ ತೋರಲಿದ್ದಾರೆ. ಅಲ್ಲದೆ ನಿಮಗೆ ಆಗಾಗ್ಗೆ ನೆರವು ಒದಗಿಸಲಿದ್ದಾರೆ. ಇದು ಬದುಕಿನ ಬೇರೆ ಬೇರೆ ಹಂತಗಳಲ್ಲಿ ನಿಮಗೆ ಸಹಾಯ ಮಾಡಲಿದೆ. ಈ ವರ್ಷದ ಆರಂಭದಲ್ಲಿ ನಿಮ್ಮ ಒಡಹುಟ್ಟಿದವರು ನಿಮಗೆ ಸಹಾಯ ಮಾಡಲಿದ್ದಾರೆ. ಅಲ್ಲದೆ ಅವರೊಂದಿಗೆ ನೀವು ಸಾಕಷ್ಟು ದೂರಕ್ಕೆ ಹೋಗಲಿದ್ದೀರಿ. ಪ್ರವಾಸವನ್ನು ಆಯೋಜಿಸುವುದರಿಂದ ಅಥವಾ ಪಟ್ಟಣದಿಂದ ದೂರ ಹೋಗುವುದರಿಂದ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯದಲ್ಲಿ ವೃದ್ಧಿ ಉಂಟಾಗಲಿದ್ದು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳಲಿದ್ದೀರಿ. ಅವರಿಗೆ ಉಡುಗೊರೆಯನ್ನು ಖರೀದಿಸುವುದಕ್ಕಾಗಿ ಯತ್ನಿಸಲಿದ್ದೀರಿ. ಆದರೆ ಅದೇನೂ ದುಬಾರಿ ಉಡುಗೊರೆಯಲ್ಲ. ಇಂತಹ ವಿಚಾರದಲ್ಲಿ ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಬೆಂಬಲಿಸಲಿದ್ದಾರೆ.

Leave a Comment

Your email address will not be published. Required fields are marked *