ಸುಳ್ಯ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಬ್ರಹ್ಮರಗಯ ಇದರ 46ನೇ ವರ್ಷದ ದೀಪೋತ್ಸವಕ್ಕೆ ಧ್ವಜರೋಹಣ

ಸಮಗ್ರ ನ್ಯೂಸ್: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಬ್ರಹ್ಮರಗಯ, ಕೊಡಿಯಾಲಬೈಲ್ ಸುಳ್ಯ ಇದರ 46ನೇ ವರ್ಷದ ದೀಪೋತ್ಸವಕ್ಕೆ ಧ್ವಜರೋಹಣ ಕಾರ್ಯಕ್ರಮವು ಡಿ. 26 ಮಂಗಳವಾರದಂದು ಬೆಳಿಗ್ಗೆ 7 ಗಂಟೆಗೆ ಪೆರಾಜೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

Ad Widget ... ..

ಈ ಸಂದರ್ಭದಲ್ಲಿ ಊರ ಹಾಗೂ ಪರ ಊರ ಭಕ್ತಾಭಿಮಾನಿಗಳು ಮತ್ತು ಶ್ರೀ ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು.

Ad Widget

ಜ.1 ರಂದು ನಡೆಯುವ ದೀಪೋತ್ಸವದಂದು ಪೂರ್ವಾಹ್ನ 7ಕ್ಕೆ 18 ತೆಂಗಿನಕಾಯಿ ಮಹಾಗಣಪತಿ ಹೋಮ, 10 ಕ್ಕೆ ಕೊಪ್ಪರಿಗೆ ಮುಹೂರ್ತ, 11 ಕ್ಕೆ ಸಿಯಾಳಾಭಿಷೇಕ, 11:30 ಕ್ಕೆ ನವ ಕಲಶಾಭಿಷೇಕ, 12 ಕ್ಕೆ ಗಣಪತಿ ಕಲಾ ಕೇಂದ್ರ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ, 12:30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ಮದ್ಯಾಹ್ನದ ಮಹಾಪೂಜೆ, ಬಳಿಕ ಪ್ರಸಾದ ವಿತರಣೆ,ಮದ್ಯಾಹ್ನ 1 ಕ್ಕೆ ಸಾರ್ವಜನಿಕ ಅನಧಾನ, ಸಂಜೆ 6 ಕ್ಕೆ ದೀಪಾರಾಧನೆ ಮತ್ತು ಚೆಂಡೆವಾದನ, ಸಂಜೆ 5 ರಿಂದ 8 ರವರೆಗೆ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 8 ರಿಂದ ವಿಶೇಷ ರಂಗಪೂಜೆ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಭಗದ್ಭಕ್ತರು ಭಾಗವಹಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮಂಡಳಿಯು ವಿನಂತಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *