ದತ್ತಜಯಂತಿಯ ಸಂಭ್ರಮ/ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ

ಸಮಗ್ರ ನ್ಯೂಸ್: ದತ್ತಜಯಂತಿ ಹಿನ್ನೆಲೆಯಲ್ಲಿ ಇಂದಿನಿಂದ ಆರು ದಿನಗಳ ಕಾಲ ಚಂದ್ರದ್ರೋಣ ಪರ್ವತಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಮುಳ್ಳಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಹಾಗೂ ಮಾಣಿಕ್ಯಧಾರಾಗೆ ಇಂದಿನಿಂದ ಡಿಸೆಂಬರ್ 27ರವರೆಗೆ ಎಲ್ಲಾ ಪ್ರವಾಸಿಗರಿಗೆ ಸಂಪೂರ್ಣ ನಿಬರ್ಂಧ ಹೇರಲಾಗಿದೆ.

Ad Widget ... ..

ನಾವು ಈಗಾಗಲೇ ಹೋಂ ಸ್ಟೇ ಹಾಗೂ ರೆಸಾಟ್ರ್ಗಳನ್ನು ಬುಕ್ ಮಾಡಿದ್ದೇವೆ ಎನ್ನುವ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸಬಹುದು. ಆದರೆ ಹೋಮ್ ಸ್ಟೇಯಲ್ಲೇ ಇರಬೇಕು, ಮೇಲೆ ಹೆಸರಿಸಿದ ಪ್ರವಾಸಿಗರ ತಾಣಕ್ಕೆ ತೆರಳುವಂತಿಲ್ಲ.

Ad Widget

ಇದರ ಜೊತೆಗೆ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್‍ಆರ್‍ಪುರದಲ್ಲಿ ಮೂರು ದಿನಗಳ ಕಾಲ ಮದ್ಯ ನಿಷೇಧಿಸಲಾಗಿದೆ.

Leave a Comment

Your email address will not be published. Required fields are marked *