ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೂ ಎದುರಾಯ್ತು ಸಂಕಷ್ಟ…!

ಸಮಗ್ರ ನ್ಯೂಸ್: ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೆ ಹೊಸ ಸಂಕಷ್ಟ ಇದೀಗಎದುರಾಗಿದೆ. ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ನಟ ದರ್ಶನ್ ವಿರುದ್ಧ ಗರಂ ಆಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ.

Ad Widget ... ..

ವನ್ಯ ಜೀವಿಗಳ ಬಗ್ಗೆ ಅಪಕ್ವ ಸಂಭಾಷಣೆ ವಿರುದ್ಧವಾಗಿ ಆಕ್ರೋಶ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ಇರುವ ಸಂಭಾಷಣೆ ಬಗ್ಗೆ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ಅಸಮಾಧಾನ ಹೊರ ಹಾಕಿದ್ದು ಇದು ಸಿನಿಮಾಗೆ ಚಾಲೆಂಜಿಂಗ್ ಆಗಿದೆ.

Ad Widget

ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು ಎಂಬ ಡೈಲಾಗ್ ಕಾಟೇರ ಸಿನಿಮಾದಲ್ಲಿ ಬಂದಿತ್ತು. ಈ ಮೂಲಕ ಹಾವುಗಳನ್ನು ಹೊಡೆಯುವ ರೀತಿ ಮಾತನಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.

ಈಗಾಗಲೇ ಅಳಿವನ ಅಂಚಿನಲ್ಲಿರುವ ವಿಷಕಾರಿ ಹಾವುಗಳ ಸಂರಕ್ಷಣೆಗೆ 2021ರಲ್ಲಿ ಕಾನೂನು ರೂಪಿಸಲಾಗಿದೆ ಎನ್ನಲಾಗಿದೆ. ವಿಷಕಾರಿ ಹಾವುಗಳನ್ನು ಉಳಿಸಿಕೊಂಡು ಹೋಗಬೇಕೇ ಹೊರತು ಹೊಡೆದು ಕೊಲ್ಲೋಕೆ ಪ್ರಚೋದನೆ ನೀಡಬಾರದು. ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ರಾಜ್ಯಪಾಲರಿಗೆ ಹಾಗೂ ಸಿಎಂ ಸಿದ್ದುಗೆ ಮೇಲ್ ಮೂಲಕ ದೂರು ನೀಡಲಾಗಿದೆ.

Leave a Comment

Your email address will not be published. Required fields are marked *