ಕಾರ್ಕಳ: ಖಾಸಗಿ ಬಸ್ ಹಾಗೂ ಜೀಪ್ ಡಿಕ್ಕಿ| ಓರ್ವ ಮೃತ್ಯು| ಹಲವರಿಗೆ ಗಾಯ

ಸಮಗ್ರ ನ್ಯೂಸ್:ಖಾಸಗಿ ಬಸ್ ಹಾಗೂ ಜೀಪ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ಮಂಜಲ್ಪಾಕೆ ಎಂಬಲ್ಲಿ ನಡೆದಿದೆ.

Ad Widget ... ..

ಮೂಡುಬಿದಿರೆಯಿಂದ ಕಾರ್ಕಳವಾಗಿ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮಹೇಂದ್ರ ಜೀಪು ಡಿಕ್ಕಿ ಹೊಡೆದಿದೆ. ಓವರ್ ಟೇಕ್ ಮಾಡುವ ಸಂದರ್ಭ ಈ ಅಪಘಾತ ಸಂಭವಿಸಿದೆ. ಜೀಪಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡಿದ್ದ ಓರ್ವ ಗಾಯಾಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜೀಪಿನಲ್ಲಿದ್ದವರು ಸ್ಥಳಿಯ ದೈವದ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ಸಾಗುತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಆಂಬುಲೆನ್ಸ್‌ ನಲ್ಲಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Ad Widget

Leave a Comment

Your email address will not be published. Required fields are marked *