ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ವಿವಾಹವಾಗಿ ಪತ್ತೆ!? ಫೋಟೋ ವೈರಲ್…

ಸಮಗ್ರ ನ್ಯೂಸ್: ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ವಿವಾಹವಾಗಿದ್ದಾರೆ ಎನ್ನಲಾದ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Ad Widget ... ..

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಬ್ಲಾಕ್ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲೋನಿ ನಿವಾಸಿ ಆಯೇಷಾ (19) ಡಿ.1 ರಂದು ನಾಪತ್ತೆಯಾಗಿದ್ದರು. ಇದೀಗ ಈ ಜೋಡಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Ad Widget

ಈ ಪ್ರಕರಣಕ್ಕೆ ಪುಷ್ಠಿ ಎಂಬಂತೆ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಇದರಲ್ಲಿ ಯುವಕ ಪ್ರಶಾಂತ್ ಮತ್ತು ಆಯೇಷಾ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರ ಮಿತ್ರರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ವೈರಲ್ ಮಾಡಿದ್ದಾರೆ.

ಅಯೇಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಿಸಿಕೊಂಡಿದ್ದಾರೆ. ನಾಪತ್ತೆಯಾದ ದಿನ ಆಯೇಷಾ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿ ಕುಟುಂಬ ಮೂಲತಃ ಕಾರವಾರದ ಮುಂಡಗೋಡದವರಾಗಿದ್ದು, ಈಕೆಯ ತಂದೆ ಸ್ಥಳೀಯವಾಗಿ ಉದ್ಯೋಗದಲ್ಲಿದ್ದಾರೆ.

Leave a Comment

Your email address will not be published. Required fields are marked *