ಸಮುದ್ರ ಗಡಿ ಉಲ್ಲಂಘನೆ/ ಮೀನುಗಾರರ ಬಂಧನ

ಸಮಗ್ರ ನ್ಯೂಸ್: ಮನ್ನಾರ್ ಮತ್ತು ಕೋವಿಲನನ್ ಈಶಾನ್ಯ ಸಮುದ್ರದ ಗಡಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತದ 21 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ಬಂಧಿಸಿರುವುದಾಗಿ ಮೀನುಗಾರಿಕಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ದೋಣಿಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

Ad Widget ... ..

ಶ್ರೀಲಂಕಾದ ಸಮುದ್ರದ ಗಡಿಯನ್ನು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದು, 2023ರಲ್ಲಿ ಒಟ್ಟು 195 ಮೀನುಗಾರರನ್ನು ಬಂಧಿಸಿರುವುದಾಗಿ ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

Ad Widget

ಪಾಕ್ ಜಲಸಂಧಿಯು ಭಾರತ ಹಾಗೂ ಶ್ರೀಲಂಕಾ ನಡುವಿನ ಜಲಗಡಿಯಾಗಿದ್ದು, ಈ ಗಡಿಯನ್ನು ಉಲ್ಲಂಘಿಸಿ ಮೀನುಗಳ ಬೇಟೆಯಾಡಿದ ಆರೋಪದ ಮೇಲೆ ಭಾರತದ ಮೀನುಗಾರರನ್ನು ಶ್ರೀಲಂಕಾದ ಅಧಿಕಾರಿಗಳು ಅನೇಕ ಬಾರಿ ಬಂಧಿಸಿದ್ದಾರೆ.

Leave a Comment

Your email address will not be published. Required fields are marked *