ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ಇಂದು ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರದ ಎರಡು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಈ ಪೈಕಿ ಮೀಸಲಾತಿ ವಿಚಾರದ ಕುರಿತು ಐತಿಹಾಸಿಕ ಮಸೂದೆಯನ್ನು ಕೇಂದ್ರ ಮಂಡಿಸಿದೆ. ಈ ಮಸೂದೆಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದೆ.
ಮೀಸಲಾತಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದು ಜಮ್ಮ ಕಾಶ್ಮೀರ ವಿಧಾನಸಭೆಯಲ್ಲಿ ಇಬ್ಬರು ಕಾಶ್ಮೀರ ಪಂಡಿತರ ಮಹಿಳೆ ಸೇರಿ ಹಾಗೂ ಒಂದು ಸ್ಥಾನವನ್ನು ಪಾಕ್ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ನೀಡಲಾಗಿದೆ. ಈ ಎರಡು ಸಮುದಾಯದಿಂದ ಒಟ್ಟು ಮೂವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಒಟ್ಟು 114 ಕ್ಷೇತ್ರದಿಂದ ಪ್ರತಿನಿಧಿಗಳು ಇರಲಿದ್ದು, ಇವುಗಳಲ್ಲಿ 90 ಸ್ಥಾನ ಚುನಾವಣೆ ಮೂಲಕ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದರೆ, 24 ಮೀಸಲಾತಿ ಸ್ಥಾನಗಳಾಗಿದೆ. 24 ಸ್ಥಾನಗಳನ್ನು ಕಾಶ್ಮೀರ ಆಕ್ರಮಿತ ಪಾಕಿಸ್ತಾನ ಭಾಗಕ್ಕೆ ಮೀಸಲಾತಿ ಮೂಲಕ ನೀಡಲಾಗಿದ್ದು, ಇದೀಗ 24ಕ್ಕೆ ಮತ್ತೆ ಮೂರು ಸ್ಥಾನ ಸೇರಿಸಲಾಗಿದೆ.
ಭಯೋತ್ಪಾದಕತೆ ಕಾರಣದಿಂದ ಕಾಶ್ಮೀರ ತೊರೆದ ಸಮುದಾಯದ ಕೊಂದು ಕೊರತೆ, ಬೇಡಿಕೆಗೆ ಧ್ವನಿಯಾಗಲು ಕಾಶ್ಮೀರದ ವಲಸೆ ಸಮುದಾಯ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ನಿರ್ಗತಿಕರಾಗಿರುವ ಸಮುದಾಯಕ್ಕೆ ಸೀಟು ಕಾಯ್ದಿರಿಸಿದ ಬಿಲ್ ಲೋಕಸಭೆಯಲ್ಲಿ ಮಂಡನೆಯಾಗಿದೆ.