ಸುಳ್ಯ: ಗ್ರಾಮ ಮಟ್ಟದಲ್ಲಿ ವಿಶೇಷಚೇತನರ ಸ್ಪರ್ಧಾ ಕಾರ್ಯಕ್ರಮಕ್ಕೆ ರೆಡಿಯಾಗ್ತಿದೆ ಗುತ್ತಿಗಾರು|

ಸಮಗ್ರ ನ್ಯೂಸ್: ಜಿಲ್ಲಾ ಮಟ್ಟದಲ್ಲೇ ಪ್ರಪ್ರಥಮ ಬಾರಿಗೆ ಗ್ರಾಮ ಪಂಚಾಯತ್ ವಿಶೇಷ ಚೇತನರಿಗಾಗಿ ಸ್ಪರ್ಧಾ ಕಾರ್ಯಕ್ರಮ ಮತ್ತು ವಿಶ್ವ ವಿಕಲ ಚೇತನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

Ad Widget ... ..

ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದ್ದು, ಗುತ್ತಿಗಾರು ಮತ್ತು ನಾಲ್ಕೂರು ಗ್ರಾಮಗಳ ವಿಶೇಷ ಚೇತನರಿಗೆ ಸ್ಪರ್ಧಾ ಕಾರ್ಯಕ್ರಮ ಹಾಗೂ ವಿಶ್ವ ವಿಕಲಚೇತನರ ದಿನಾಚರಣಾ ಕಾರ್ಯಕ್ರಮ ಡಿ‌.8ರಂದು ಗುತ್ತಿಗಾರಿನ ಪಂಚಾಯತ್ ಪ.ವರ್ಗದ ಸಭಾಭವನದಲ್ಲಿ ನಡೆಯಲಿದೆ.

Ad Widget

ಗ್ರಾಮ ಪಂಚಾಯತ್ ಗೊಳಪಟ್ಟ ಗ್ರಾಮಗಳ ವಿಶೇಷ ಚೇತನರು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಆಯೋಜಕರು ಕೋರಿದ್ದಾರೆ. ಸಾಮಾನ್ಯವಾಗಿ ತಾಲೂಕು ಅಥವಾ ಜಿಲ್ಲಾಮಟ್ಟದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿದ್ದು, ಇದೇ ಪ್ರಥಮ ಬಾರಿಗೆ ಪಂಚಾಯತ್ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

Leave a Comment

Your email address will not be published. Required fields are marked *