ಪೂರ್ವ ಕರಾವಳಿಗೆ ”ಮೈಚಾಂಗ್” ಚಂಡಮಾರುತ ಭೀತಿ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಮಳೆಗಾಲ ಅಂತ್ಯವಾಗುವ ಸಮಯದಲ್ಲೇ ವರುಣ ದೇವ ಶಾಕ್ ಕೊಡುತ್ತಿದ್ದಾನೆ. ಕರ್ನಾಟಕದ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Ad Widget ... ..

ತಮಿಳುನಾಡಿನ ಉತ್ತರ ಕರಾವಳಿ ಹಾಗೂ ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನ್‌ ಅಪ್ಪಳಿಸೋ ನಿರೀಕ್ಷೆಯಿದೆ ಅಂತ ಹವಾಮಾನ ಇಲಾಖೆ ಹೇಳಿದೆ.

Ad Widget

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿಂದಾಗಿ ಇದು ಮುಂದಿನ 12 ಗಂಟೆಗಳಲ್ಲಿ ತಮಿಳುನಾಡು ‌‍ಮತ್ತು ಆಂಧ್ರದ ಕರಾವಳಿಯನ್ನು ತಲುಪಲಿದೆ ಅಂತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಎಫೆಕ್ಟ್‌ನಿಂದಾಗಿ ಇದೀಗ ತಮಿಳುನಾಡಿನ ಚೆನ್ನೈ, ಕಡಲೂರು ಮತ್ತು ಎನ್ನೂರು ಕರಾವಳಿಗಳಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಈ ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮಿಚಾಂಗ್‌ ಚಂಡಮಾರುತದ ಬಗ್ಗೆ ವಿಶಾಖ ಪಟ್ಟಣಂ ಸೈಕ್ಲೋನ್‌ ವಾರ್ನಿಂಗ್‌ ಸೆಂಟರ್‌ ಅಧಿಕಾರಿಗಳು ವೈಜಾಕ್‌ ಬಿಟ್ಟು ನೆಲ್ಲೂರು ಹಾಗೂ ಮಚಲೀಪಟ್ಟಣಂ ನಡುವೆ ಭೂ ಕುಸಿತ ಉಂಟು ಮಾಡುವ ಸಾಧ್ಯತೆಯಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

ಬಂಗಾಳ ಕೊಲ್ಲಿಯ ಈ ಎಫೆಕ್ಟ್‌ನಿಂದಾಗಿ ಡಿಸೆಂಬರ್‌ 3,4 ಮತ್ತು 5ರಂದು ಭಾರತದ ಪೂರ್ವ ಹಾಗೂ ದಕ್ಷಿಣ ಭಾಗದ ಕೆಲವು ಕಡೆ ಭಾರಿ ಹಾಗೂ ಹಲವು ಕಡೆ ಸಾಮಾನ್ಯ ಮಳೆಯನ್ನ ನಿರೀಕ್ಷಿಸಲಾಗಿದ್ದು, ನಂತರ ಮಳೆ ಕಡಿಮೆಯಾಗಲಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

Leave a Comment

Your email address will not be published. Required fields are marked *