ಬೆಂಗಳೂರು: ಕೆಲ ದಿನಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ರೋಚಕ ಮಾಹಿತಿಯೊಂದು ಬಯಲಾಗಿದೆ. ಪೀಟರ್ ಮತ್ತು ಟೀಮ್ ಮಾಡಿದ್ದು ಒಂದು ಕೊಲೆ. ಆದ್ರೆ ಮಾಡಬೇಕು ಎಂದುಕೊAಡಿದ್ದು ಮೂರು ಕೊಲೆ ಎಂಬುವುದು ತಿಳಿದು ಬಂದಿದೆ. ಅಸಲಿಗೆ ಹಂತಕರ ಗುರಿ ರೇಖಾ ಆಗಿರಲೇ ಇಲ್ಲವಂತೆ.
ಪೀಟರ್ ಕದಿರೇಶ್ನ ಪಕ್ಕ ಶಿಷ್ಯನಾಗಿದ್ದ. ಹೀಗಾಗಿ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಮೂರು ಜನರನ್ನು ಕೊಲೆ ಮಾಡಲು ಪೀಟರ್ ತೀರ್ಮಾನಿಸಿದ್ದ. ಕದಿರೇಶ್ ಹತ್ಯೆಗೆ ಕಾರಣವಾಗಿದ್ದು ಗಾರ್ಡನ್ ಶಿವ, ನವೀನ್ ಮತ್ತು ವಿನಯ್ ಎಂಬ ಮೂವರು. ಜೋಪಡಿ ರಾಜೇಂದ್ರನ ಹತ್ಯೆಗೆ ಪ್ರತಿಕಾರವಾಗಿ ಗಾರ್ಡನ್ ಶಿವನ ಅಕ್ಕನ ಮಕ್ಕಳಾದ ನವೀನ್ ಮತ್ತು ವಿನಯ್ ಸೇರಿ ಕದಿರೇಶ್ನ ಕೊಂದಿದ್ರು. ಹೀಗಾಗಿ ಕದಿರೇಶ್ ಹತ್ಯೆಗೆ ಕಾರಣರಾದವರನ್ನ ಮುಗಿಸಲು ಪೀಟರ್ ಹಲ್ಲು ಮಸೆಯುತ್ತಿದ್ದ. ಗಾರ್ಡನ್ ಶಿವ, ವಿನಯ್, ನವೀನ್ ಕೊಲೆ ಮಾಡಬೇಕು ಎಂದು ಪೀಟರ್ ಮತ್ತು ಟೀಂ ತಯಾರಿ ಮಾಡಿಕೊಳ್ಳುತ್ತಿತ್ತು.
ಕದಿರೇಶ್ನನ್ನು ಕೊಂದವರನ್ನು ಕೊಲೆ ಮಾಡಬೇಕು ಸಹಾಯ ಮಾಡು ಎಂದು ಮೊದಲು ಪೀಟರ್, ರೇಖಾಳನ್ನೆ ಕೇಳಿದ್ದ. ಅಣ್ಣ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಬೇಕು ಸಹಾಯ ಮಾಡಿ ಎಂದು ರೇಖಾರನ್ನು ಬೇಡಿಕೊಂಡಿದ್ದ. ಅದ್ರೆ ಇದಕ್ಕೆ ರೇಖಾ ತಾನು ಯಾವುದೆ ಸಹಕಾರ ಕೊಡಲ್ಲಾ ಎಂದಿದ್ದಾರೆ. ರೌಡಿಸಂ ಐಡಿಯಾ ಇಲ್ಲದ ರೇಖಾ, ಪೀಟರ್ ಮನವಿಯನ್ನ ತಿರಸ್ಕರಿಸಿದ್ದರು. ಈ ವಿಚಾರಕ್ಕೆ ರೇಖಾ ಮೇಲೆ ಪೀಟರ್ಗೆ ಕೋಪವಿತ್ತು. ಇದೆ ಸಮಯದಲ್ಲಿ ಅರೂಣ್ ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ.
ಜೈಲಿನಿಂದ ಹೊರ ಬಂದು ಕದಿರೇಶ್ ಕೊಲೆಗೆ ರೇಖಾ ಕಾರಣ ಎಂದಿದ್ದ. ಆಕೆ ಕದಿರೇಶ್ ಕೊಲೆ ಮಾಡಲು ನವೀನ್, ವಿನಯ್ ಗೆ ಸಹಾಯ ಮಾಡಿದ್ದಾಳೆ ಎಂದಿದ್ದ. ಅರೂಣ್ ಮತ್ತು ಮಾಲಾ ೪ ತಿಂಗಳ ಹಿಂದೆ ಪೀಟರ್ ಅಂಡ್ ಟೀಮ್ ಜೊತೆ ಮೀಟಿಂಗ್ ಮಾಡಿದ್ದರು. ಮೀಟಿಂಗ್ನಲ್ಲಿ ಪೀಟರ್, ಗಾರ್ಡನ್ ಶಿವನ ಬಗ್ಗೆ ಹೇಳಿದ್ದ. ಅದೇ ಮೀಟಿಂಗ್ನಲ್ಲಿ ಅರೂಣ್ ರೇಖಾ ಬಗ್ಗೆ ಕೂಡ ಸ್ಕೆಚ್ ಹಾಕಿದ್ದ. ಗಾರ್ಡನ್ ಶಿವ ಮತ್ತು ವಿನಯ್ ರನ್ನ ನಂತ್ರ ಮುಗಿಸೋಣ. ಮೊದಲು ರೇಖಾಳನ್ನ ಮುಗಿಸೋಣ ಎಂದು ಮಾತನಾಡಿ ಮೀಟಿಂಗ್ ಮುಗಿಸಿದ್ರು. ಹಲವು ದಿನಗಳ ಕಾಲ ರೇಖಾಳ ದಿನಚರಿ ಅವರು ಯಾವಾಗ ಒಂಟಿಯಾಗಿರುತ್ತಾರೆ ಎಂದು ಗಮನಿಸಿದ್ರು. ಊಟ ನೀಡಿ ವಾಪಸ್ಸು ಹೋಗುವ ಸಮಯದಲ್ಲಿ ಜನರು ಕಡಿಮೆ ಇರ್ತಾರೆ ಅವಾಗ ಕೊಲೆ ಮಾಡೋದು ಎಂದು ಪ್ಲಾನ್ ಫಿಕ್ಸ್ ಮಾಡಿದ್ರು. ಈ ರೀತಿ ಮೃತ ಕದಿರೇಶ್ ಪತ್ನಿ ರೇಖಾ ಕದಿರೇಶ್ರ ಕೊಲೆ ಮಾಡಲಾಗಿದೆ. ಈ ಕೊಲೆಯ ಬಳಿಕ ನಗರದಲ್ಲಿ ಮತ್ತೆ ಮೂರು ಕೊಲೆ ನಡೆಯುವ ಸಾಧ್ಯತೆ ಇತ್ತು. ಸದ್ಯ ಪೊಲೀಸರ ತನಿಖೆಯಿಂದ ಈ ಮೂವರ ಕೊಲೆ ಬಗ್ಗೆ ಮಾಹಿತಿ ಸಿಕ್ಕಿದೆ.