ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಲರ್ಟ್ ಆಗಿರುವಂತೆ ಮಾರ್ಗಸೂಚಿ ಪ್ರಕಟ. ಬೆಡ್, ಮೆಡಿಸಿನ್ ಮತ್ತು ಆರೋಗ್ಯ ಸೇವೆ ಸಿದ್ದಪಡಿಸಿಕೊಳ್ಳುವಂತೆ ಸೂಚನೆ.
- ಸರ್ಕಾರಿ ಮತ್ತು ಖಾಸಗಿ ಆಸ್ಫತ್ರೆಗಳು, ಮೆಡಿಕಲ್ ಕಾಲೇಜ್ ಗಳು ಕಡ್ಡಾಯವಾಗಿ ಐಎಲ್ ಐ ಮತ್ತು ಸ್ಯಾರಿ ಕೇಸ್ ಗಳನ್ನ ರಿಪೋರ್ಟ್ ಮಾಡಬೇಕು .ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು.
2.ಶಂಕಿತ ಪ್ರಕಣಗಳ ಸ್ಯಾಂಪಲ್ ತೆಗೆದು ಟೆಸ್ಟ್ ಗೆ ಒಳಪಡಿಸಬೇಕು.
- ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಐಎಲ್ ಐ, ಸ್ಯಾರಿ ಕೇಸ್ ಗಳ ರಿಪೋರ್ಟ್ ಮಾಡಬೇಕು.
4.ಆಸ್ಫತ್ರೆ ಒಳಗಡೆ ಹೆಲ್ತ್ ವರ್ಕರ್ಸ್ ಫೇಸ್ ಮಾಸ್ಕ್ ಮತ್ತು ರಕ್ಷಣಾ ಕವಚ ಹಾಕಬೇಕು.
- ಐಎಲ್ ಐ , ಸ್ಯಾರಿ ಕೇಸ್ ಗಳನ್ನ ರಿಪೋರ್ಟ್ ಮಾಡಬೇಕು.
6.ಐಎಲ್ ಐ, ಸ್ಯಾರಿ ಕೇಸ್ ಗಳು ಹೆಚ್ಚಾದ್ರೆ ಸ್ಯಾಂಪಲ್ ಅನ್ನು ಲ್ಯಾಬ್ ಗೆ ರವಾನೆ ಮಾಡಬೇಕು.
7.ಆಸ್ಫತ್ರೆಗಳಲ್ಲಿ ಬೆಡ್ ಮೀಸಲಿಡಬೇಕು, ಅಕ್ಸಿಜನ್, ವೆಂಟಿಲೇಟರ್ ಇದೆಯಾ ನೋಡಿಕೊಳ್ಳಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಫತ್ರೆಗಳಲ್ಲಿ ಕೊವಿಡ್ ಮತ್ತು ಇನ್ಫ್ಯೂಯೆನ್ಸಾ ದಾಖಲಾದ್ರೆ ಗುಣಲಕ್ಷಣಗಳ ಬಗ್ಗೆ ಪರಿಶೀಲಿಸಬೇಕು.
8.ಖಾಸಗಿ ಆಸ್ಫತ್ರೆಗಳು ಐಎಲ್ ಐ, ಸ್ಯಾರಿ ಕೇಸ್ ಗಳ ರಿಪೋರ್ಟ್ಅನ್ನು ಆರೋಗ್ಯ ಇಲಾಖೆಗೆ ವರದಿ ಕೊಡಬೇಕು
9.ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚು ನಿಗಾವಹಿಸಬೇಕು
ಇನ್ಫ್ಲ್ಯೂಯೆನ್ಸಾ ಪ್ಲೊ ನಿಂದ ಎಚ್ಚರ ವಹಿಸಲು ಏನು ಮಾಡಬೇಕು? ಏನು ಮಾಡಬಾರದು?
- ಮೂಗು ಮತ್ತು ಬಾಯಿಯನ್ನ ಕೈ ಚೀಲದಿಂದ ಮುಚ್ಚಿಕೊಳ್ಳಬೇಕು
- ಸಾಬೂನಿನಿಂದ ಕೈಯನ್ನ ತೊಳೆಯಬೇಕು
- ಅನಗತ್ಯವಾಗಿ ಕಣ್ಣು, ಬಾಯಿ , ಮೂಗು ಮುಟ್ಟಿಕೊಳ್ಳೊದನ್ನ ಕಡಿಮೆ ಮಾಡಬೇಕು
- ಜನಸಂದಣಿ ಪ್ರದೇಶಗಳಿಗೆ ಹೋಗಬಾರದು, ಹೋದರೆ ಮಾಸ್ಕ್ ಬಳಸಿ
- ಶಂಕಿತ ವ್ಯಕ್ತಿಗಳು ಅಥವಾ ಶೀತ, ಜ್ವರ , ನೆಗಡಿ ಇರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಬೇಕು
6.ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬಾರದು
- ನ್ಯೂಟ್ರಿಷಿಯನ್ ಫುಡ್ ತಿನ್ನಬೇಕು
- ಅನಾರೋಗ್ಯದಿಂದ ಬಳಲುತ್ತಾ ಇದ್ದರೆ ಪ್ರಯಾಣ ಕಡಿಮೆ ಮಾಡಿ.